ನವದೆಹಲಿ : ರಾಷ್ಟ್ರೀಯ ಔಷಧ ಬೆಲೆ ಪ್ರಾಧಿಕಾರವು (NPPA) ಒಂದಲ್ಲ ಎರಡಲ್ಲ, 107 ಔಷಧಗಳ ಬೆಲೆಯನ್ನ ಮಿತಿಗೊಳಿಸಿರುವುದರಿಂದ ದೇಶಾದ್ಯಂತದ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ಈ ಮೂಲಕ ಪ್ಯಾರಸಿಟಮಾಲ್’ನಿಂದ ಹಿಡಿದು ಕ್ಯಾನ್ಸರ್ ಔಷಧಿಗಳು ಕೂಡ ಅಗ್ಗವಾಗಲಿವೆ. ಈ ವರ್ಷ ಎರಡನೇ ಬಾರಿಗೆ ಪ್ಯಾರಸಿಟಮಾಲ್ ಸೇರಿ ಇತರ ಅಗತ್ಯ ಔಷಧಿಗಳಲ್ಲಿ ಕುಸಿತ ಕಂಡಿವೆ. ಆದಾಗ್ಯೂ, ಮಾಂಟೆಲುಕಾಸ್ಟ್ ಮತ್ತು ಮೆಟ್ಫಾರ್ಮಿನ್’ನಂತಹ ಕೆಲವು ಔಷಧಿಗಳ ಬೆಲೆಗಳನ್ನ ಹೆಚ್ಚಿಸಲಾಗಿದೆ.
ಬೆಲೆಗಳನ್ನ ಪರಿಷ್ಕರಿಸಿದ 107 ಔಷಧಗಳ ಪಟ್ಟಿಯನ್ನ ಎನ್ಪಿಪಿಎ ಮಂಗಳವಾರ ಬಿಡುಗಡೆ ಮಾಡಿದೆ. ಇನ್ನು ಪ್ಯಾರಸಿಟಮಾಲ್, ಅಮೋಕ್ಸಿಸಿಲಿನ್, ರಬೆಪ್ರಜೋಲ್ ಮತ್ತು ಮೆಟ್ಫಾರ್ಮಿನ್’ನಂತಹ ಇತರ ಪ್ರಮುಖ ಔಷಧಿಗಳು ಸೇರಿವೆ. ಅನೇಕ ಔಷಧಿಗಳನ್ನ ಗ್ರಾಹಕರು ಮತ್ತು ರೋಗಿಗಳು ನಿಯಮಿತವಾಗಿ ಬಳಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕು. ಪ್ರತಿ ಟ್ಯಾಬ್ಲೆಟ್’ಗೆ 2.3 ರೂ.ಗೆ ಮಾರಾಟವಾಗುತ್ತಿದ್ದ ಪ್ಯಾರಾಸಿಟಮಾಲ್ (65ಒ ಮಿಗ್ರಾಂ) ಅನ್ನು ಈಗ ಪ್ರತಿ ಟ್ಯಾಬ್ಲೆಟ್’ಗೆ 1.8 ರೂ.ಗೆ ಮಿತಿಗೊಳಿಸಲಾಗಿದೆ. ಅಂತೆಯೇ, ಅಮೋಕ್ಸಿಸಿಲಿನ್ ಮತ್ತು ಪೊಟ್ಯಾಸಿಯಮ್ ಕ್ಲಾವುಲೇಟ್ ಬೆಲೆ ಕೂಡ ಪ್ರತಿ ಮಾತ್ರೆಗೆ 22.3 ರೂ.ಗಳಿಂದ 16.8 ರೂ.ಗೆ ಇಳಿದಿದೆ. ಪ್ಯಾರಾಸಿಟಮಾಲ್, ಇತರ ಅಗತ್ಯ ಔಷಧಿಗಳು NPPA 127 ಔಷಧಗಳ ಬೆಲೆಗಳನ್ನ ನಿಗದಿಪಡಿಸುವುದರಿಂದ ಅಗ್ಗವಾಗಲಿದೆ.
ಪ್ಯಾರಸಿಟಮಾಲ್, ಮಾಕ್ಸಿಸಿಲಿನ್ ಮತ್ತು ಪೊಟ್ಯಾಸಿಯಮ್ ಕ್ಲಾವುಲಾನೇಟ್ ನಂತಹ ಔಷಧಗಳಲ್ಲದೆ, ಕ್ಯಾನ್ಸರ್ ಔಷಧಗಳ ಬೆಲೆಗಳನ್ನ ಸಹ ಎನ್ಪಿಪಿಎ ಮಿತಿಗೊಳಿಸಿದೆ. ಸರ್ಕಾರವು ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಗಳ ಬೆಲೆಯನ್ನು ಶೇಕಡಾ ೪೦ ರಷ್ಟು ಮಿತಿಗೊಳಿಸಿದೆ. ಕ್ಯಾನ್ಸರ್ ಜೊತೆಗೆ, ಜ್ವರ, ಮಧುಮೇಹಕ್ಕೆ ಚಿಕಿತ್ಸೆ ನೀಡಲು ಬಳಸುವ ಔಷಧಿಗಳ ಬೆಲೆಗಳನ್ನು ಸಹ ಶೇಕಡಾ 40 ರಷ್ಟು ಕಡಿಮೆ ಮಾಡಲಾಗಿದೆ. ಏತನ್ಮಧ್ಯೆ, ಔಷಧಿಗಳು ಮತ್ತು ಪ್ರಮುಖ ಔಷಧಗಳ ಬೆಲೆಗಳನ್ನ ಕಡಿಮೆ ಮಾಡುವ ನಿರ್ಧಾರವನ್ನ ಎಲ್ಲರೂ ಸ್ವಾಗತಿಸಿದ್ದಾರೆ.
ಆಲ್ ಇಂಡಿಯಾ ಆರ್ಗನೈಸೇಶನ್ ಆಫ್ ಕೆಮಿಸ್ಟ್ಸ್ ಅಂಡ್ ಡ್ರಗ್ಗಿಸ್ಟ್ಸ್ (AIOCD) ಪ್ರಧಾನ ಕಾರ್ಯದರ್ಶಿ ರಾಜೀವ್ ಸಿಂಘಾಲ್ ಟೈಮ್ಸ್ ಆಫ್ ಇಂಡಿಯಾಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಇದು ಸ್ವಾಗತಾರ್ಹ ಕ್ರಮವಾಗಿದೆ. ಆದ್ರೆ, ಪ್ಯಾರಾಸಿಟಮಾಲ್’ನಂತಹ ಕೆಲವು ಔಷಧಿಗಳು ಈಗಾಗಲೇ ಕಡಿಮೆ ಬೆಲೆಗಳನ್ನ ಕಂಡಿವೆ. ಸಕ್ರಿಯ ಔಷಧೀಯ ಪದಾರ್ಥಗಳ (API) ಬೆಲೆ ಏರಿಕೆಯಾಗುತ್ತಿರುವುದರಿಂದ, ತಯಾರಕರಿಗೆ ಬೆಲೆಗಳನ್ನ ಮತ್ತಷ್ಟು ಕಡಿತಗೊಳಿಸಲು ಕಡಿಮೆ ಅವಕಾಶವಿದೆ. ಭವಿಷ್ಯದಲ್ಲಿ ಸರಬರಾಜಿನ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ನಾನು ಭಾವಿಸುತ್ತೇನೆ” ಎಂದರು.
BIGG NEWS: ಕೋವಿಡ್ ತಜ್ಞರ ಜೊತೆ ಇಂದು ಸಿಎಂ ಸಭೆ; ಸರ್ಕಾರದ ಸೂಚನೆಯಂತೆ ಬಿಬಿಎಂಪಿ ಕ್ರಮ: ತುಷಾರ್ ಗಿರಿನಾಥ್
Viral Video : ‘ಹಠಾತ್ ಪ್ರವಾಹ’ದಲ್ಲಿ ಕೊಚ್ಚಿ ಹೋದ ಹಲವು ಜನ, ಎದೆ ಜಲ್ಲೆನಿಸುವ ವಿಡಿಯೋ ವೈರಲ್