ಕೆಎನ್ಎನ್ಡಿಜಿಟಲ್ ಡೆಸ್ಕ್ : ಟಾಲಿವುಡ್ ಸೀನಿಯರ್ ನಟ ನಾಗಾರ್ಜುನಗೆ ಗೋವಾ ಸರ್ಕಾರ ಬಿಗ್ ಶಾಕ್ ನೀಡಿದ್ದು, ಅಕ್ರಮ ನಿರ್ಮಾಣಗಳ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ.
ಇತ್ತೀಚಿಗಷ್ಟೇ ತೆಲಂಗಾಣ ಸರ್ಕಾರ ರೈತರಿಗೆ ನೀಡುತ್ತಿರುವ ರೈತ ಬಂಧು ಯೋಜನೆಯಿಂದ ನಾಗಾರ್ಜನ ಕುಟುಂಬ ಲಾಭ ಪಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬಂದಿತ್ತು. ಈ ವಿಷಯ ಮರೆಯುವ ಮುನ್ನವೇ ಗೋವಾ ರಾಜ್ಯದ ಗ್ರಾಮ ಪಂಚಾಯಿತಿಯೊಂದು ನಾಗಾರ್ಜುನ ಅವರಿಗೆ ಅಕ್ರಮ ನಿರ್ಮಾಣಗಳ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿದೆ.
ಗೋವಾದ ಮಂಡ್ರೆಮ್ ಪಂಚಾಯತ್ ಬುಧವಾರ ಅಕ್ರಮ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಿದೆ. ಅಶ್ವೇವಾಡ ಗ್ರಾ.ಪಂ.ವ್ಯಾಪ್ತಿಯ 211/2 ಬಿ.ನಲ್ಲಿ ಇವರ ನಿರ್ದೇಶನದ ಮೇರೆಗೆ ಅಕ್ರಮ ನಿರ್ಮಾಣಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನೋಟಿಸ್ ನೀಡಲಾಗಿದೆ.
ಸರಪಂಚಿ ಅಮಿತ್ ಸಾವಂತ್ ಅವ್ರು ಗೋವಾ ಗ್ರಾಮ ಪಂಚಾಯತ್ ರಾಜ್ ಕಾಯ್ದೆ 1994ರ ಅಡಿಯಲ್ಲಿ ಈ ನೋಟಿಸ್ ನೀಡಿದ್ದಾರೆ. ಕೂಡಲೇ ಅಕ್ರಮ ಕಟ್ಟಡಗಳನ್ನ ನಿಲ್ಲಿಸಬೇಕು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ. ಇಲ್ಲದಿದ್ದರೆ ಕಾನೂನು ಕ್ರಮ ಜರುಗಿಸಲಾಗುವುದು. ಈ ವಿಚಾರಕ್ಕೆ ನಾಗಾರ್ಜುನ್ ಸೇರಿದಂತೆ ಅವರ ತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಅನ್ನೋದನ್ನ ಕಾದು ನೋಡಬೇಕು.
BIGG NEWS : ಕೋವಿಡ್ ಆತಂಕ : ರಾಜ್ಯದಲ್ಲಿ ಶೀಘ್ರವೇ ಹೊಸ ಮಾರ್ಗಸೂಚಿ ಬಿಡುಗಡೆ : ಆರೋಗ್ಯ ಸಚಿವ ಸುಧಾಕರ್