ಕೆಎನ್ಎನ್ ಡಿಜಿಟಲ್ ಡೆಸ್ಕ್ : ಇಸ್ತಾಂಬುಲ್-ದೆಹಲಿ ವಿಮಾನದಲ್ಲಿ ಇಂಡಿಗೋ ಏರ್ ಹೋಸ್ಟೆಸ್ ಪ್ರಯಾಣಿಕನೊಂದಿಗೆ ಜಗಳವಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆಹಾರ ಆಯ್ಕೆ ವಿಚಾರದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.
ಘಟನೆಯ ವಿಡಿಯೋವನ್ನು ಗುರುಪ್ರೀತ್ ಸಿಂಗ್ ಹನ್ಸ್ ಎಂಬ ಪ್ರಯಾಣಿಕ ಟ್ವೀಟ್ ನಲ್ಲಿ ಹಂಚಿಕೊಂಡಿದ್ದಾರೆ. ಪ್ರಯಾಣಿಕರು ಮತ್ತು ಸಿಬ್ಬಂದಿ ನಡುವೆ ವಾಗ್ವಾದ ನಡೆಯುತ್ತಿರುವುದನ್ನು ಕಾಣಬಹುದು. ನೆಟ್ಟಿಗರು ತರಹೇವಾರಿ ಕಮೆಂಟ್ ಮಾಡಿದ್ದಾರೆ.
Tempers soaring even mid-air: "I am not your servant"
An @IndiGo6E crew and a passenger on an Istanbul flight to Delhi (a route which is being expanded soon with bigger planes in alliance with @TurkishAirlines ) on 16th December : pic.twitter.com/ZgaYcJ7vGv
— Tarun Shukla (@shukla_tarun) December 21, 2022
ಘಟನೆ ಸಂಬಂಧ ಜೆಟ್ ಸಿಇಒ ಪ್ರತಿಕ್ರಿಯಿಸಿದ್ದು, ವಿಮಾನದ ಸಿಬ್ಬಂದಿ ಕೂಡ ಮನುಷ್ಯರು. ಅನೇಕ ವರ್ಷಗಳಲ್ಲಿ ನಾನು ಸಿಬ್ಬಂದಿಗೆ ಕಪಾಳಮೋಕ್ಷ ಮಾಡುವುದು ನೋಡಿದ್ದೇನೆ. ಬೋರ್ಡ್ ಫ್ಲೈಟ್ಗಳಲ್ಲಿ ನಿಂದನೆ ಮಾಡುವುದು, ಸೇವಕ ಎಂದು ಕೆಟ್ಟದಾಗಿ ಕರೆಯುತ್ತಾರೆ. ಇವೆಲ್ಲಾ ಒತ್ತಡದ ಹೊರತಾಗಿಯೂ ಅವರು ಪ್ರಯಾಣಿಕರ ಸೇವೆ ಮಾಡುತ್ತಾರೆ ಎಂದಿದ್ದಾರೆ.
ವಿಧಾನಸಭೆಯಲ್ಲಿ ಹುಬ್ಬಳ್ಳಿ ‘ದರ್ಗಾ ತೆರವು’ ವಿಚಾರ ಪ್ರಸ್ತಾಪ : ನನ್ನದು 19 ಗುಂಟೆ ಜಾಗ ಹೋಗಿದೆ ಎಂದ ಸಿಎಂ ಬೊಮ್ಮಾಯಿ
‘ಬೊಗಳುವ ನಾಯಿ ಕಚ್ಚೋದಿಲ್ಲ’ : ಸಂಜಯ್ ರಾವುತ್ ಹೇಳಿಕೆಗೆ ಸಚಿವ ಅಶೋಕ್ ತಿರುಗೇಟು