ಬೆಂಗಳೂರು: ದಿವಂಗತ ಪ್ರಧಾನಿ ವಾಜಪೇಯಿ ಅವರ ಜನ್ಮದಿನದ ಅಂಗವಾಗಿ ಡಿ.24ರ (ಶನಿವಾರ) ಮಧ್ಯರಾತ್ರಿ ಮಲ್ಲೇಶ್ವರಂ ವ್ಯಾಪ್ತಿಯಲ್ಲಿ ವಾಕಥಾನ್ ಹಮ್ಮಿಕೊಳ್ಳಲಾಗಿದೆ. ಆಸಕ್ತರು https://prod.racetime.in/event/nmw2022 ಇಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ತಿಳಿಸಿದ್ದಾರೆ.
BIG NEWS: ರಾಜ್ಯದ ಆಟೋ, ಟ್ಯಾಕ್ಸಿ ಚಾಲಕರಿಗೆ ಭರ್ಜರಿ ಗುಡ್ ನ್ಯೂಸ್: ಆಯುಷ್ಮಾನ್ ಯೋಜನೆ ಜಾರಿ, ಉಚಿತ ಚಿಕಿತ್ಸೆ
ಬುಧವಾರ ಈ ವಿಚಾರ ತಿಳಿಸಿರುವ ಅವರು, ಸಾವಿರಾರು ಜನ ಭಾಗವಹಿಸಲಿರುವ ಈ ವಾಕಥಾನ್ ಅಂದು ರಾತ್ರಿ 11 ಗಂಟೆಗೆ ಮಲ್ಲೇಶ್ವರಂ ಕ್ರೀಡಾಂಗಣದಿಂದ ಆರಂಭವಾಗಲಿದೆ. ನಂತರ ಇದು ಗುಟ್ಟಹಳ್ಳಿಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಸ್ಯಾಂಕಿ ರಸ್ತೆ ಸ್ಕೈವಾಕ್, ಗೋಕಾಕ್ ಪಾರ್ಕ್, 18ನೇ ಅಡ್ಡರಸ್ತೆಯ ಸರಕಾರಿ ಕಾಲೇಜು ಮೂಲಕ ಸಾಗಲಿದೆ. ಬಳಿಕ ಚಂದ್ರಶೇಖರ್ ಆಜಾದ್ ಕ್ರೀಡಾಂಗಣದಲ್ಲಿ ಇದು ಕೊನಗೊಳ್ಳಲಿದೆ ಎಂದಿದ್ದಾರೆ.
BIG NEWS: ಭಾರತದ ಪಿತಾಮಹ ಪ್ರಧಾನಿ ಮೋದಿ: ಅಮೃತಾ ಫಡ್ನವೀಸ್ | India has two ‘rashtra pita’
ಶಿಕ್ಷಣ, ಕ್ರೀಡೆ, ಆರೋಗ್ಯ, ನಾಗರಿಕ ಸುರಕ್ಷತೆ ಮತ್ತು ಸುಂದರ ಪರಿಸರ ನಿರ್ಮಾಣ ಎನ್ನುವ ಐದು ಅಂಶಗಳ ಆಧಾರದ ಮೇಲೆ ಮಾದರಿ ಮಲ್ಲೇಶ್ವರಂ ಕ್ಷೇತ್ರವನ್ನು ರೂಪಿಸಲಾಗುತ್ತಿದೆ. ಇದರ ಬಗ್ಗೆ ಜನಜಾಗೃತಿ ಮೂಡಿಸಲು ವಾಕಥಾನ್ ನಡೆಸಲಾಗುತ್ತಿದೆ ಎಂದು ಸಚಿವರು ತಿಳಿಸಿದ್ದಾರೆ.
ಇದೇ 25 ರಂದು ವಾಜಪೇಯಿ ಅವರ ಹುಟ್ಟುಹಬ್ಬವನ್ನು ಸುಶಾಸನ ದಿನವನ್ನಾಗಿ ಆಚರಿಸಲಾಗುತ್ತದೆ.