ಬೆಂಗಳೂರು : ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ಪೊಲೀಸರು ದಾಳಿ ನಡೆಸುವಂತಿಲ್ಲ ಎಂದು ಹೈಕೋರ್ಟ್ ( HIGH COURT ) ಆದೇಶ ಹೊರಡಿಸಿದೆ.
ಪ್ರಕರಣವೊಂದರ ವಿಚಾರಣೆ ನಡೆಸಿದ ಹೈಕೋರ್ಟ್ ಅಧಿಕ ಬಡ್ಡಿ ವಿಧಿಸುವವರ ವಿರುದ್ಧ ದಾಳಿ ನಡೆಸಿ, ಪೊಲೀಸರು ಯಾವುದೇ ದಾಖಲೆ ವಶಪಡಿಸಿಕೊಳ್ಳುವುದಕ್ಕೆ ಅಧಿಕಾರ ಇಲ್ಲ ಎಂದು ಕೋರ್ಟ್ ಆದೇಶ ಹೊರಡಿಸಿದೆ.
ಗೋಕಾಕ್ ನಗರ ಪೊಲೀಸರು ದಾಳಿ ನಡೆಸಿ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿದ್ದರು, ಇದನ್ನು ಪ್ರಶ್ನಿಸಿ ಗೋಕಾಕ್ ನ ಬಸವರಾಜ ಮತ್ತು ಜಾಕೀರ್ ಹುಸೇನ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾ.ಹೇಮಂತ್ ಚಂದನ್ ಗೌಡ ಅವರಿದ್ದ ಪೀಠ ಎಫ್ ಐ ಆರ್ ರದ್ದುಗೊಳಿಸಿ ಆದೇಶಿಸಿದೆ.
ಕರ್ನಾಟಕ ಲೇವಾದೇವಿ ಕಾಯಿದೆ ಪ್ರಕಾರ ನೊಂದಣಾಧಿಕಾರಿಗಳು, ಉಪನೊಂದಣಾಧಿಕಾರಿಗಳು ಇಲ್ಲವೇ ಸರ್ಕಾರ ನೇಮಕ ಮಾಡಿರುವ ಅಧಿಕಾರಿ ಮಾತ್ರ ದುಬಾರಿ ಬಡ್ಡಿ ಕಾಯಿದೆಯಡಿ ದಾಳಿ ನಡೆಸಬಹುದು. ಪೊಲೀಸರು ದಾಳಿ ನಡೆಸಿರುವುದು ಕಾನೂನು ಬಾಹಿರವಾಗಿದೆ ಎಂದು ಕೋರ್ಟ್ ಹೇಳಿದೆ.
BIGG NEWS : ಡಿ.23 ಕ್ಕೆ ಉಪಸಭಾಪತಿ ಚುನಾವಣೆ : ನಾಳೆ ಎಂ.ಕೆ ಪ್ರಾಣೇಶ್ ನಾಮಪತ್ರ ಸಲ್ಲಿಕೆ ಸಾಧ್ಯತೆ