ಬೆಂಗಳೂರು : ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ, ಸುಬ್ಬಯ್ಯ ವೃತ್ತ, ಬೆಂಗಳೂರು 27 ಇಲ್ಲಿ ಭರ್ತಿಯಾಗದೇ ಉಳಿದಿರುವ ಪ್ರಥಮ ಬಿ.ಫಾರ್ಮ್ ಕೋರ್ಸ್ಗಳಿಗೆ ದಿನಾಂಕ: 27-12-2022 ರಂದು ಬೆಳಿಗ್ಗೆ 10.00 ರಿಂದ 11.30 ಗಂಟೆಗೆಯೊಳಗೆ ನೊಂದಣಿ ಅರ್ಹ ಅಭ್ಯರ್ಥಿಗಳು, ಸಮಿತಿಯ ಮುಂದೆ ಸಂದರ್ಶನಕ್ಕೆ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮೂಲ ದಾಖಲಾತಿಗಳೊಂದಿಗೆ (ಎಸ್.ಎಸ್.ಎಲ್.ಸಿ, ಪಿ.ಯು.ಸಿ. ಬಿ.ಇ.ಓ ರವರಿಂದ ದೃಢೀಕರಣಗೊಂಡಿರುವ ವ್ಯಾಸಂಗ ಪ್ರಮಾಣ ಪತ್ರ ಹಾಗೂ ಸಿ.ಇ.ಟಿ, ಬ್ಯಾಂಕ್ ಪ್ರಮಾಣ ಪತ್ರವು ಕಡ್ಡಾಯವಾಗಿರುತ್ತದೆ.) ಹಾಜರಾಗಲು ಸೂಚಿಸಿದೆ. ಹಾಗೂ ಆಯ್ಕೆಯಾದ ವಿದ್ಯಾರ್ಥಿಗಳು ಅದೇ ದಿನಾಂಕದಂದು ಪ್ರವೇಶವನ್ನು ಪಡೆಯತಕ್ಕದ್ದು, ಪ್ರಥಮ ಬಿ.ಫಾರ್ಮ್ ಕೋರ್ಸ್ನ ಪ್ರವೇಶ ಶುಲ್ಕ ರೂ. 14,450/- ಆಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 080-22222681. ಅಥವಾ EMAIL: principal.gcp123@gmail.com ಅಥವಾ website: www.govtcopblr.org ಸಂಪರ್ಕಿಸುವಂತೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ