ಕೆ ಎನ್ ಎನ್ ಡಿಜಿಟಲ್ ಡೆಸ್ಕ್ : ಭಾರತಕ್ಕೆ ಚೀನಾ ನುಗ್ಗಿದಂತೆ ಕರ್ನಾಟಕಕ್ಕೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಮಹಾರಾಷ್ಟ್ರ-ಕರ್ನಾಟಕ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ, ನಮಗೆ ಯಾರ ಅನುಮತಿ ಬೇಕಾಗಿಲ್ಲ , ಭಾರತಕ್ಕೆ ಚೀನಾ ನುಗ್ಗಿದಂತೆ ಬೆಳಗಾವಿಗೆ ನಾವು ನುಗ್ಗುತ್ತೇವೆ ಎಂದು ಶಿವಸೇನಾ ನಾಯಕ ಸಂಜಯ್ ರಾವತ್ ಉದ್ಧಟತನದ ಹೇಳಿಕೆ ನೀಡಿದ್ದಾರೆ.
ಕರ್ನಾಟಕದ ಸಿಎಂ ವಿವಾದದ ಕಿಡಿ ಹೊತ್ತಿಸುತ್ತಿದ್ದಾರೆ, ಮಹಾರಾಷ್ಟ್ರ-ಕರ್ನಾಟಕ ಯಾವುದೇ ಕ್ರ,ಮ ಕೈಗೊಂಡಿಲ್ಲ, ಬೆಳಗಾವಿಗೆ ನುಗ್ಗಲು ನಮಗೆ ಯಾರ ಅನುಮತಿ ಬೇಕಾಗಿಲ್ಲ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಉದ್ಧಟತನ ಮೆರೆದಿದ್ದಾರೆ. ಈ ವಿಚಾರವಾಗಿ ತಮಗೆ ಯಾರದ್ದೇ ‘ಅನುಮತಿ’ ಅಗತ್ಯವಿಲ್ಲ ಎಂದು ರಾಜ್ಯಸಭೆ ಸಂಸದ ಸಂಜಯ್ ರಾವತ್, ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ನಾವು ಮಾತುಕತೆ ಮೂಲಕ ಬಗೆಹರಿಸಲು ಬಯಸಿದ್ದೇವೆ. ಆದರೆ ಕರ್ನಾಟಕ ಮುಖ್ಯಮಂತ್ರಿ ಬೆಂಕಿ ಹಚ್ಚುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ದುರ್ಬಲ ಸರ್ಕಾರವಿದೆ. ಅದು ಈ ವಿಚಾರವಾಗಿ ಯಾವುದೇ ನಿಲುವು ತೆಗೆದುಕೊಳ್ಳುತ್ತಿಲ್ಲ” ಎಂದು ರಾವತ್ ವಾಗ್ದಾಳಿ ನಡೆಸಿದ್ದಾರೆ.
ಪೋಕ್ಸೋ ಕೇಸ್ : ಮುರುಘಾ ಶ್ರೀಗಳನ್ನು ಗಲ್ಲಿಗೇರಿಸುವಂತೆ ‘BSP’ ಪ್ರತಿಭಟನೆ |Murgha Sri