ಬೆಳಗಾವಿ: ಸತತ ಮೂರನೇ ಬಾರಿಗೆ ವಿಧಾನ ಪರಿಷತ್ತಿನ ಸಭಾಪತಿಯಾಗಿ ಬಸವರಾಜ ಹೊರಟ್ಟಿ ಇಂದು ಆಯ್ಕೆಯಾದರು. ಈ ಹಿನ್ನಲೆಯಲ್ಲಿ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ಸಲ್ಲಿಸಿದರು.
ಸಭಾಪತಿಯಾಗಿ ಇಂದು ಅವಿರೋಧವಾಗಿ ಮತ್ತೆ ಮೂರನೇ ಬಾರಿಗೆ ಬಸವರಾಜ ಹೊರಟ್ಟಿಯವರು ಆಯ್ಕೆಯಾದರು. ಹೀಗಾಗಿ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಂಚಮಸಾಲಿಗೆ ಮೀಸಲಾತಿ ಘೋಷಿಸಿದ್ರೆ ಸಿಎಂಗೆ ಸನ್ಮಾನ, ಇಲ್ಲವಾದಲ್ಲಿ ಹೋರಾಟ : ಬಸವ ಮೃತ್ಯುಂಜಯ ಸ್ವಾಮೀಜಿ
ನೂತನ ಸಭಾಪತಿ ಬಸವರಾಜ ಹೊರಟ್ಟಿ ಅಭಿನಂದಿಸಿದ ಬಳಿಕ ಮಾತನಾಡಿದಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ನೇರ ಮತ್ತು ನಿಷ್ಟುರವಾಗಿ ಮಾತನಾಡುವ ಸ್ವಭಾವದವರು. ಎಲ್ಲಾ ಸಿಎಂ ಜೊತೆ ಆತ್ಮೀಯರು ಆಗಿದ್ದಾರೆ. ಒಬ್ಬ ಸಿಎಂ ಜೊತೆ ಗೆಳೆತನ ಇದ್ಸು ಮತ್ತೊಂದು ಸಿಎಂ ಜೊತೆ ಮಾತು ಬಿಡಲ್ಲ. ನಾವು ವಿರೋ಼ಧ ಪಕ್ಷದಲ್ಲಿ ಇದ್ದಾಗ ಹೆಂಗೆ ಕೆಲಸ ಮಾಡಿಸಿಕೊಳ್ಳಬೇಕೋ ಗೊತ್ತಿಲ್ಲ. ಆದರೆ ನೀವು ಹಾಗಲ್ಲ, ಎಲ್ಲಿದ್ರೂ ಕೆಲಸ ಮಾಡಿ ಕೊಳ್ತೀರ ಎಂದರು.
ಉತ್ತರ ಕರ್ನಾಟಕದ ಧ್ವನಿಯಾಗಿ ಕೆಲಸ ಮಾಡಿದ್ದೀರಿ. ಲಾ ವಿವಿ ಹುಬ್ಬಳ್ಳಿ ಗೆ ಬಂದಿದ್ರೆ ಅದು ನಿಮ್ಮಿಂದ. ಆ ಭಾಗದ ಜ್ವಲಂತ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸಿದ್ದೀರಿ. ಪಕ್ಷವನ್ನು ಮೀರಿ, ನಿಮ್ಮ ನಿಲುವಿನಿಂದ ಜನರಿಗೆ ನ್ಯಾಯ ಕೊಡಿಸಿದ್ದೀರಿ. ದಾಖಲೆ ಮುರಿಯಲು ಇನ್ನೂ ಐವತ್ತು ವರ್ಷ ಬೇಕೇನೋ ಗೊತ್ತಿಲ್ಲ ಎಂದು ಹೇಳಿದರು.
ಕೋವಿಡ್ ಸೋಂಕಿತರ ಪರೀಕ್ಷಾ ಮಾದರಿಗಳ ಜೀನೋಮ್ ಸೀಕ್ವೆನ್ಸಿಂಗ್ಗೆ ಕ್ರಮ: ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ
ಸಭಾಪತಿ ನಡೆದ ಚುನಾವಣೆಯಲ್ಲಿ ಸರ್ವಾನುಮತದಿಂದ ಆಯ್ಕೆಯಾಗಿರೋದು ಸಂತೋಷ ತಂದಿದೆ. 1980 ರಿಂದ ಹೊರಟ್ಟಿ ಬಗ್ಗೆ ನನಗೆ ಗೊತ್ತಿದೆ. ಶಿಕ್ಷಕರಾಗಿ ಸಂಘಟನೆಯಲ್ಲಿ ಎಲ್ಲ ಶಿಕ್ಷಕರ ಪ್ರೀತಿಗೆ ಪಾತ್ರರಾಗಿದ್ದಾರೆ. ಮೊದಲ ಚುನಾವಣೆ ತಮ್ಮ ಸ್ವಂತ ಶಕ್ತಿಯಿಂದ ಗೆದ್ದುಕೊಂಡಿದ್ದರು. ಚುನಾವಣೆಗಳ ಮಧ್ಯೆ ತಮ್ಮ ವ್ಯಕ್ತಿತ್ವ ಹೆಚ್ಚಿಸಿಕೊಂಡು ಬಂದಿದ್ದಾರೆ. ಸಾರ್ವಜನಿಕ ಜೀವನದಲ್ಲಿ 42 ವರ್ಷ ತುಂಬಿದೆ. ನಿಮ್ಮ ಮತದಾರರ ಹಿತ ಚಿಂತನೆ ಶಿಕ್ಷಣ ಸಚಿವರಾಗಿ ಜಾರಿಗೆ ಹಲವು ಬದಲಾವಣೆ ತಂದಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಬುನಾದಿಯಾಕಿದ್ದಾರೆ ಎಂದರು.