ಬೆಂಗಳೂರು: ಮುರುಗೇಶ್ ನಿರಾಣಿ ಪೇಮೆಂಟ್ ನೀಡಿ ಸಚಿವರದವರು ಎನ್ನುವ ಮೂಲಕ ಬಿಜೆಪಿಯ ಸಚಿವ ಸ್ಥಾನದ ಮಾರಾಟವನ್ನು ಯತ್ನಾಳ್ ತಿಳಿಸಿದ್ದಾರೆ. ಆ ಹಣ ಪಡೆದವರು ಯಾರು ಎಂಬುದನ್ನ ಬಿಜೆಪಿ ಉತ್ತರಿಸಬೇಕು. ಬಸವರಾಜ ಬೊಮ್ಮಾಯಿ ಅವರಾ?, ನರೇಂದ್ರ ಮೋದಿಯವರಾ?, ಅಮಿತ್ ಷಾ, ಜೆಪಿ ನಡ್ಡ ಅವರಾ? ಈ ಅಕ್ರಮ ಹಣ ವಹಿವಾಟಿನ ತನಿಖೆ ಇಲ್ಲವೇಕೆ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಪ್ರಶ್ನಿಸಿದೆ.
ಮುರುಗೇಶ್ ನಿರಾಣಿ ಪೇಮೆಂಟ್ ನೀಡಿ ಸಚಿವರದವರು ಎನ್ನುವ ಮೂಲಕ ಬಿಜೆಪಿಯ ಸಚಿವ ಸ್ಥಾನದ ಮಾರಾಟವನ್ನು ಯತ್ನಾಳ್ ತಿಳಿಸಿದ್ದಾರೆ.
ಆ ಹಣ ಪಡೆದವರು ಯಾರು ಎಂಬುದನ್ನ @BJP4Karnataka ಉತ್ತರಿಸಬೇಕು.
◆ @BSBommai ಅವರಾ?
◆ @narendramodi ಅವರಾ?
◆ @AmitShah ಅವರಾ?
◆ @JPNadda ಅವರಾ?ಈ ಅಕ್ರಮ ಹಣದ ವಹಿವಾಟಿನ ತನಿಖೆ ಇಲ್ಲವೇಕೆ?
— Karnataka Congress (@INCKarnataka) December 21, 2022
ಈ ಕುರಿತು ಟ್ವಿಟ್ ಮಾಡಿದ್ದು, ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಅನುದಾನ ನೀಡದ ಬಸವರಾಜ ಬೊಮ್ಮಾಯಿ ಅವರು ರಾಗ, ದ್ವೇಷ, ತಾರತಮ್ಯವಿಲ್ಲದೆ ಆಡಳಿತ ನಡೆಸುತ್ತೇನೆಂದು ಸ್ವೀಕರಿಸಿದ ಪ್ರಮಾಣವಚನಕ್ಕೆ ದ್ರೋಹ ಎಸಗಿದ್ದಾರೆ. ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾದ ಕೋವಿಡ್ 40% ಲೂಟಿಗೆ ಅಡ್ಡಿಯಾಗಲಿಲ್ಲವೇ? ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸ್ವತಃ ಸಿಎಂ ಒಪ್ಪಿದ್ದಾರೆ ಎಂದು ಹೇಳಿದೆ.
ಅಲ್ಪಸಂಖ್ಯಾತರನ್ನೇ ಗುರಿಯಾಗಿಸಿ ಅನುದಾನ ನೀಡದ @BSBommai ಅವರು ರಾಗ, ದ್ವೇಷ, ತಾರತಮ್ಯವಿಲ್ಲದೆ ಆಡಳಿತ ನಡೆಸುತ್ತೇನೆಂದು ಸ್ವೀಕರಿಸಿದ ಪ್ರಮಾಣವಚನಕ್ಕೆ ದ್ರೋಹ ಎಸಗಿದ್ದಾರೆ.
ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾದ ಕೋವಿಡ್ 40% ಲೂಟಿಗೆ ಅಡ್ಡಿಯಾಗಲಿಲ್ಲವೇ?
ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಸ್ವತಃ ಸಿಎಂ ಒಪ್ಪಿದ್ದಾರೆ. pic.twitter.com/akicSgGtmd
— Karnataka Congress (@INCKarnataka) December 21, 2022
ಮಂಗಳೂರು ಸ್ಪೋಟದಿಂದ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವೈಫಲ್ಯ ಬಯಲಾಗಿದೆ. ಜೊತೆಗೆ ಸಂತ್ರಸ್ತರೆಡೆಗಿನ ಸರ್ಕಾರದ ನಿರ್ಲಕ್ಷ್ಯವೂ ಬಯಲಾಗಿದೆ. ಬಾಂಬ್ ಸ್ಪೋಟದಿಂದ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ 5 ಲಕ್ಷ ಪರಿಹಾರ ಕೊಡುವುದನ್ನೇ ಮರೆತಿದೆ ಸರ್ಕಾರ. ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಾ ಸಂತ್ರಸ್ತರನ್ನು ಅರಗ ಜ್ಞಾನೇಂದ್ರ ಅವರೇ ಎಂದು ಕೇಳಿದೆ.
ಮಂಗಳೂರು ಸ್ಪೋಟದಿಂದ ಕಾನೂನು ಸುವ್ಯವಸ್ಥೆ ಹಾಗೂ ಗುಪ್ತಚರ ವೈಫಲ್ಯ ಬಯಲಾಗಿದೆ.
ಜೊತೆಗೆ ಸಂತ್ರಸ್ತರೆಡೆಗಿನ ಸರ್ಕಾರದ ನಿರ್ಲಕ್ಷ್ಯವೂ ಬಯಲಾಗಿದೆ.ಬಾಂಬ್ ಸ್ಪೋಟದಿಂದ ಗಂಭೀರ ಗಾಯಗೊಂಡ ಆಟೋ ಚಾಲಕನಿಗೆ 5 ಲಕ್ಷ ಪರಿಹಾರ ಕೊಡುವುದನ್ನೇ ಮರೆತಿದೆ ಸರ್ಕಾರ.
ರಾಜಕೀಯ ಲಾಭದ ಲೆಕ್ಕಾಚಾರ ಹಾಕುತ್ತಾ ಸಂತ್ರಸ್ತರನ್ನು@JnanendraAraga ಅವರೇ? pic.twitter.com/2XUNQTBJRC
— Karnataka Congress (@INCKarnataka) December 21, 2022