ಬೆಂಗಳೂರು: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸೋ ಸಲುವಾಗಿ, ಮೈಸೂರು, ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿ ಐವರು ಐಪಿಎಸ್ ಅಧಿಕಾರಿಗಳನ್ನು ( IPS Officer ) ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ.
ಈ ಕುರಿತಂತೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಮೈಸೂರು ಎಸ್ಪಿಯಾಗಿದ್ದಂತ ಆರ್ ಚೇತನ್ ಅವರನ್ನು ಇಂಟೆಲಿಜೆನ್ಸಿ ಎಸ್ಪಿಯಾಗಿ ವರ್ಗಾವಣೆಗೊಳಿಸಲಾಗಿದೆ.
BIG NEWS: ನಾಳೆ ಪಂಚಮಸಾಲಿ ಸಮುದಾಯಕ್ಕೆ ಗುಡ್ ನ್ಯೂಸ್: ಮೀಸಲಾತಿಯನ್ನು ಸಿಎಂ ಘೋಷಿಸುತ್ತಾರೆ – ಶಾಸಕ ಯತ್ನಾಳ್
ಇನ್ನೂ ಬೆಂಗಳೂರು ಕ್ರೈಂ ವಿಭಾಗದ ಎಐಜಿಪಿ ಸೀಮ ಲೇಟ್ಕರ್ ಅವರನ್ನು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದೆ. ಮೈಸೂರಿನ ಇಂಟಲಿಜೆನ್ಸಿ ಎಸ್ಪಿಯಾಗಿದ್ದಂತ ಮುತುರಾಜು ಎಂ ಎವರನ್ನು ಮೈಸೂರು ನಗರ ಲಾ ಅಂಡ್ ಆರ್ಡರ್ ವಿಭಾಗಡ ಡಿಸಿಪಿಯಾಗಿ ವರ್ಗಾವಣೆಗೊಳಿಸಲಾಗಿದೆ.
BIGG NEWS : “ಭಾರತ ನೋಡಿ ಜಗತ್ತು ಕಲಿಯಬೇಕಿದೆ” ; ‘UPI’ ಮತ್ತು ‘ಆಧಾರ್’ ಯಶಸ್ಸಿಗೆ ‘ಗೂಗಲ್ ಸಿಇಒ’ ಪ್ರಶಂಸೆ
ಲೋಕಾಯುಕ್ತ ಎಸ್ಪಿಯಾಗಿದ್ದಂತ ಬಾಬಾಸಾಬ್ ನೇಮಗೌಡ ಅವರನ್ನು ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ಗದಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದಂತ ಶಿವಪ್ರಕಾಶ್ ದೇವರಾಜು ಅವರನ್ನು, ಬೆಂಗಳೂರಿನ ಕ್ರೈ ವಿಭಾಗದ ಎಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.