ಮೈಸೂರು : ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಚಿರತೆ ಹಾವಳಿ ಹೆಚ್ಚಾಗಿದ್ದು, ಇದೀಗ ಗೊರವನಹಳ್ಳಿ ಬಳಿ ರೈತ ಮೇಲೆ ಚಿರತೆ ದಾಳಿ ನಡೆಸಿದ ಘಟನೆ ಬೆಳಕಿಗೆ ಬಂದಿದೆ
ಕಬ್ಬಿನ ತರಗಿಗೆ ಬೆಂಕಿ ಹಾಕುತ್ತಿದ್ದ ರೈತ ನಿಂಗೇಗೌಡ ಮೇಲೆ ಚಿರತೆ ದಾಳಿ ನಡೆದಿದೆ. ಕೈನಲ್ಲಿದ್ದ ಕುಡುಗೋಲಿನಿಂದ ಚಿರತೆ ಮೇಲೆ ಪ್ರಹಾರ ಮಾಡಿದಕ್ಕೆ ಅದೃಷ್ಟವಷಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರ ರೈತ ಗಾಯಗೊಂಡು ನಿಂಗೇಗೌಡನಿಗೆ ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ