ಹುಬ್ಬಳ್ಳಿ : ಜಿಲ್ಲೆಯ ಬೈರಿದೇವರಕೊಪ್ಪದಲ್ಲಿರುವ ಹಜರತ್ ಸೈಯದ್ ಮಹಮೂದ್ ಶಾ ಖಾದ್ರಿ ದರ್ಗಾದ ಒಂದು ಭಾಗವನ್ನು ತೆರವು ಮಾಡಲು ಮುಂದಾಗಿದ್ದು, ಈ ನಿಟ್ಟಿನಲ್ಲಿ ನಗರದಲ್ಲಿಉದ್ವಿಗ್ನ ವಾತಾವರಣ ನಿರ್ಮಾಣಗೊಂಡಿದ್ದು, 144 ಸೆಕ್ಷನ್ ಜಾರಿ ಮಾಡಲಾಗಿದೆ
ಹುಬ್ಬಳ್ಳಿ – ಧಾರವಾಡ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಪಕ್ಕದಲ್ಲೇ ಹಜರತ್ ಸೈಯದ್ ಮೆಹಮೂದ್ ಶಾ ಖಾದ್ರಿ ದರ್ಗಾ ಇದೆ. ರಸ್ತೆ
ಅಭಿವೃದ್ಧಿ ಕಾಮಗಾರಿಗಾಗಿ ದರ್ಗಾದ ಒಂದು ಭಾಗವನ್ನು ಕೆಡವಲು ಸ್ಥಳೀಯ ಮಹಾನಗರ ಪಾಲಿಕೆ ನಿರ್ಧರಿಸಲಾಗಿದೆ.
ದರ್ಗಾದ ಒಂದು ಭಾಗವನ್ನು ಕೆಡವಲು ಸ್ಥಳೀಯ ಮುಸ್ಲಿಮರ ಗುಂಪು ಆಕ್ಷೇಪಿಸಿದ ನಂತರ ಉದ್ವಿಗ್ನತೆ ಉಂಟಾಗಿದೆ. ಹೀಗಾಗಿ ಹುಬ್ಬಳ್ಳಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹುಬ್ಬಳ್ಳಿ ಮತ್ತು ಧಾರವಾಡ ನಗರಗಳಲ್ಲಿ ಸೆಕ್ಷನ್ 144 ರ ಅಡಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.