ಕೆಎನ್ಎನ್ಡಿಜಿಟಲ್ ಡೆಸ್ಕ್ : ಯುವಕನೊಬ್ಬನ ಆನ್ಲೈನ್ ಗೇಮ್ ಹುಚ್ಚು ಕುಟುಂಬವೇ ರಸ್ತೆಗೆ ಬೀಳುವ ಪರಿಸ್ಥಿತಿಗೆ ಕಾರಣವಾಗುತ್ತಿದೆ. ಅದ್ರಂತೆ, ಯುವಕನೊಬ್ಬ ಆನ್ ಲೈನ್ ಗೇಮ್ ಆಡಿ 95 ಲಕ್ಷ ರೂ. ಕಳೆದುಕೊಂಡಿದ್ದು, ಇದರಿಂದಾಗಿ ಇಡೀ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದ ಸೀತಾರಾಂಪುರದಲ್ಲಿ ಈ ಘಟನೆ ನಡೆದಿದೆ.
ಪದವಿ ವಿದ್ಯಾರ್ಥಿಯೊಬ್ಬರು ಇತ್ತೀಚೆಗೆ ‘ಕಿಂಗ್ 527’ ಎಂಬ ಆನ್ಲೈನ್ ಆಟವನ್ನ ಡೌನ್ಲೋಡ್ ಮಾಡಿದ್ದಾರೆ. ಈ ಆಟವನ್ನ ಆಡಲು ನಿಮ್ಮ ಬ್ಯಾಂಕ್ ಖಾತೆಯನ್ನ ನೀವು ಲಿಂಕ್ ಮಾಡಬೇಕಾಗುತ್ತದೆ. ಅದ್ರಂತೆ, ಆ ಯುವಕ ಆತನ ತಂದೆಯ ಬ್ಯಾಂಕ್ ಖಾತೆಯನ್ನ ಲಿಂಕ್ ಮಾಡಿ ಅದರ ಮೂಲಕ ಹಣ ಪಾವತಿ ಮಾಡುತ್ತಿದ್ದ. ಈ ಪ್ರಕ್ರಿಯೆಯಲ್ಲಿ ಖಾತೆಯಲ್ಲಿದ್ದ 95 ಲಕ್ಷ ರೂ. ಹಣವೆಲ್ಲ ಮುಗಿದು ಹೋದಾಗ ತಂದೆಗೆ ವಿಷಯ ತಿಳಿದಿದೆ. ಇದರಿಂದ ಅವರ ಹಣವೆಲ್ಲ ಕಳೆದುಕೊಂಡು ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅಂದ್ಹಾಗೆ,ಇತ್ತೀಚೆಗೆ ಯುವಕನ ತಂದೆಗೆ ಸರ್ಕಾರ ಭೂಸ್ವಾಧೀನ ಪರಿಹಾರವಾಗಿ 95 ಲಕ್ಷ ನೀಡಿತ್ತು.
ತಂದೆ ಆ ಹಣವನ್ನ ಬ್ಯಾಂಕಿಗೆ ಹಾಕಿದ್ದು, ಯುವಕ ಆನ್ ಲೈನ್ ಗೇಮ್ ಆಡಿ ಹಳವನ್ನೆಲ್ಲಾ ಕಳೆದುಕೊಂಡಿದ್ದಾನೆ. ಈಗ ಹೆತ್ತವರು ಇತ್ತಾ ಜಮೀನು ಇಲ್ಲ, ಹಣವೂ ಇಲ್ಲದೇ ಕಂಗಲಾಗಿದ್ದಾರೆ.
ಬಿಸಿ ನೀರಲ್ಲಿ ತುಂಡು ‘ಬೆಲ್ಲ’ ಹಾಕಿ, ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ, ಅಮೇಲೆ ಆಗುವ ಮ್ಯಾಜಿಕ್ ನೋಡಿ.!
BIGG NEWS : `KPTCL’ 1,500 ಹುದ್ದೆಗಳ ನೇಮಕಾತಿ ಪರೀಕ್ಷೆ : ಮುಂದಿನ ವಾರ ಕೀ ಉತ್ತರ ಪ್ರಕಟ