ಕರಾಚಿ: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ ಸಂಭವಿದೆ. ಘಟನೆಯಲ್ಲಿ 12 ಜನರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ಮಂಗಳವಾರ ತಿಳಿಸಿವೆ.
ಸೋಮವಾರ ನೈಋತ್ಯ ಪ್ರಾಂತ್ಯದ ಲಾಸ್ಬೆಲಾ ಜಿಲ್ಲೆಯ ಫಿಲ್ಲಿಂಗ್ ಅಂಗಡಿಯಲ್ಲಿ ಸಿಲಿಂಡರ್ ಗ್ಯಾಸ್ ಗ್ಯಾಸ್ ತುಂಬಿಸುವಾಗ ಸ್ಫೋಟ ಸಂಭವಿಸಿದೆ ಎಂದು ಡಾನ್ ಪತ್ರಿಕೆ ತಿಳಿಸಿದೆ.
ಸ್ಫೋಟ ಸಂಭವಿಸುತ್ತಿದ್ದಂತೆ ಬೆಂಕಿಯ ಜ್ವಾಲರ ಇಡೀ ಗ್ಯಾಸ್ ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ಗಳನ್ನು ಆವರಿಸಿತ್ತು. ಪರಿಣಾಮ ಸುತ್ತಮುತ್ತಲಲ್ಲಿ ನಿಲ್ಲಿಸಿದ್ದ ಸುಮಾರು 24ಕ್ಕೂ ಹೆಚ್ಚಿನ ಮೋಟಾರ್ಬೈಕ್ಗಳು ನಾಶವಾಗಿವೆ ಎನ್ನಲಾಗುತ್ತಿದೆ.
ಘಟನೆಯಲ್ಲಿ 25ಕ್ಕೂ ಹಚ್ಚು ಮಂದಿಗೆ ತೀವ್ರವಾಗಿ ಸುಟ್ಟ ಗಾಯಗಳಾಗಿದ್ದವು, ಅವರಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡು ಸಾವನ್ನಪ್ಪಿದ್ದಾರೆ ಎಂದು ಪೊಲೀಸರನ್ನು ಉಲ್ಲೇಖಿಸಿ ಜಿಯೋ ನ್ಯೂಸ್ ವರದಿ ಮಾಡಿದೆ.
ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
BIGG NEWS : ಸಾರಿಗೆ ನೌಕರರು-ಸಚಿವರ ಸಂಧಾನ ಸಭೆ ವಿಫಲ : ಪ್ರತಿಭಟನೆ ಮುಂದುವರೆಸಲು ನಿರ್ಧಾರ