ಕೆಎನ್ಎನ್ ಡಿಜಿಟಲ್ ಡೆಸ್ಕ್ : ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಖರ್ ಮತ್ತು ಕೃಷಿ ಸಚಿವ ತೋಮರ್, ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಸೇರಿದಂತೆ ಇತರ ಸಂಸದರೊಂದಿಗೆ ರಾಗಿ ಭೋಜನಕೂಟದಲ್ಲಿ ಭಾಗವಹಿಸಿದ್ದರು.
ಈ ಕುರಿತಂತೆ ಪ್ರಧಾನಿ ಮೋದಿಯವರು ಟ್ವೀಟ್ ಮಾಡಿದ್ದು, ನಾವು 2023 ನ್ನು ಅಂತಾರಾಷ್ಟ್ರೀಯ ರಾಗಿ ವರ್ಷವೆಂದು ಗುರುತಿಸಲು ತಯಾರಿ ನಡೆಸುತ್ತಿದ್ದೇವೆ. ಸಂಸತ್ತಿನಲ್ಲಿ ರಾಗಿ ಭಕ್ಷ್ಯಗಳನ್ನು ಬಡಿಸಿದ ರುಚಿಕರವಾದ ಊಟದಲ್ಲಿ ಭಾಗವಹಿಸಿದ್ದೇವೆ. ಪಕ್ಷಾತೀತವಾಗಿ ಭಾಗವಹಿಸುತ್ತಿರುವುದು ಸಂತಸ ತಂದಿದೆ ಎಂದು ಮೋದಿ ಬರೆದಿದ್ದಾರೆ.
#WATCH | PM Narendra Modi attended a millet-exclusive lunch at the Parliament House, earlier today#InternationalYearOfMillets2023 pic.twitter.com/bjIhP8extO
— ANI (@ANI) December 20, 2022
ನಾವು ಜೋಳ ಹಾಗೂ ರಾಗಿಯಿಂದ ಮಾಡಿದ ರೊಟ್ಟಿಗಳು ಮತ್ತು ಸಿಹಿತಿಂಡಿಗಳು ಸೇರಿದಂತೆ ಹಲವು ಭಕ್ಷ್ಯಗಳನ್ನು ತಯಾರಿಸಿದ್ದೇವೆ. ಇದಕ್ಕಾಗಿ ವಿಶೇಷವಾಗಿ ಕರ್ನಾಟಕದಿಂದ ಬಾಣಸಿಗರನ್ನು ಕರೆಸಲಾಗಿತ್ತು. ಪ್ರಧಾನಿಯವರು ಇಲ್ಲಿನ ಊಟವನ್ನು ಸವಿದಿದ್ದಕ್ಕೆ ನನಗೆ ಖುಷಿಯಾಗಿದೆ ಎಂದು ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಇಂದು ನಡೆದ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ, ಪ್ರಧಾನಿ ಮೋದಿಯವರು ಅಂತಾರಾಷ್ಟ್ರೀಯ ರಾಗಿ ವರ್ಷ 2023 ಅನ್ನು ಆಚರಿಸಲು ಒತ್ತು ನೀಡಿದರು. ರಾಗಿ ಮೂಲಕ ನಡೆಯುತ್ತಿರುವ ಪೌಷ್ಟಿಕಾಂಶ ಅಭಿಯಾನವನ್ನು ಉತ್ತೇಜಿಸುವ ಮಾರ್ಗಗಳನ್ನು ಸೂಚಿಸಿದರು. ಪ್ರಧಾನಿ ಮೋದಿಯವರ ಉಪಕ್ರಮದ ಮೇರೆಗೆ ವಿಶ್ವಸಂಸ್ಥೆಯು 2023 ನೇ ವರ್ಷವನ್ನು ಅಂತಾರಾಷ್ಟ್ರೀಯ ರಾಗಿ ವರ್ಷ (IYOM) ಎಂದು ಘೋಷಿಸಿದೆ.
ಈಶ್ವರಪ್ಪ ಮೇಲೆ ಬಿಜೆಪಿ ‘ಸರ್ಜಿ’ಕಲ್ ಸ್ಟ್ರೈಕ್’ ನಡೆಸುತ್ತಿದೆ : ಟ್ವೀಟ್ ನಲ್ಲಿ ಕಾಂಗ್ರೆಸ್ ವಾಗ್ಧಾಳಿ
BIGG NEWS : ರೈತರಿಗೆ ಗುಡ್ ನ್ಯೂಸ್ : ಶೀಘ್ರವೇ ಹಾಲಿನ 339 ಕೋಟಿ ಬಾಕಿ ಪ್ರೋತ್ಸಾಹಧನ ಬ್ಯಾಂಕ್ ಖಾತೆಗೆ ಜಮಾ