ನವದೆಹಲಿ: ಕೈಗಾರಿಕೋದ್ಯಮಿ ಬಿಲಿಯನೇರ್ ಗೌತಮ್ ಅದಾನಿಯವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಮಾತ್ರವಲ್ಲದೆ 2022 ರಲ್ಲಿ ಅತೀ ಹೆಚ್ಚು ಗಳಕೆ ಮಾಡಿದರಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾರೆ.
ಹೂಡಿಕೆದಾರರು ಈ ವರ್ಷ ಅದಾನಿ ಗ್ರೂಪ್ ಷೇರುಗಳಿಂದ ಅತ್ಯುತ್ತಮ ಆದಾಯವನ್ನು ಪಡೆದಿದ್ದಾರೆ. ಏಳರಲ್ಲಿ ನಾಲ್ಕು ದೈತ್ಯ ಷೇರುಗಳು ಶೇ.200 ಕ್ಕಿಂತ ಹೆಚ್ಚು ಗಳಿಕೆ ಮಾಡಿದ್ದಾರೆ. ಕಂಪನಿಯ ಒಟ್ಟು ಮಾರುಕಟ್ಟೆ ಬಂಡವಾಳೀಕರಣವು ಕಳೆದ ವರ್ಷದಲ್ಲಿ ಸುಮಾರು ದ್ವಿಗುಣಗೊಂಡಿದೆ. 2021 ರಲ್ಲಿ 9.6 ಲಕ್ಷ ಕೋಟಿಯಿಂದ ಡಿಸೆಂಬರ್ ಮಧ್ಯದಲ್ಲಿ 18.6 ಲಕ್ಷ ಕೋಟಿಗೆ ತಲುಪಿದೆ.
ಬ್ಲೂಮ್ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ವಿಶ್ವದ 500 ಶ್ರೀಮಂತ ವ್ಯಕ್ತಿಗಳ ಶ್ರೇಯಾಂಕದ ಪ್ರಕಾರ, ಅದಾನಿ 2022 ರಲ್ಲಿ $47 ಬಿಲಿಯನ್ಗಳಷ್ಟು ಸಂಪತ್ತನ್ನು ಹೆಚ್ಚಿಸಿದ್ದಾರೆ. ಟೆಸ್ಲಾ ಸಿಇಒ ಎಲಾನ್ ಮಸ್ಕ್ ಕೊನೆಯ ಸ್ಥಾನದಲ್ಲಿದ್ದಾರೆ.
ಶ್ರೀಮಂತರ ಪಟ್ಟಿಯಲ್ಲಿ ಅದಾನಿ, ಮಸ್ಕ್ ($156 ಬಿಲಿಯನ್) ಮತ್ತು ಐಷಾರಾಮಿ ಚಿಲ್ಲರೆ ವ್ಯಾಪಾರದ ಫ್ರೆಂಚ್ ರಾಜ ಬರ್ನಾರ್ಡ್ ಅರ್ನಾಲ್ಟ್ ($163 ಶತಕೋಟಿ) ನಂತರದ ಸ್ಥಾನದಲ್ಲಿದ್ದಾರೆ. ಅವರ ಅಂದಾಜು ನಿವ್ವಳ ಮೌಲ್ಯ $124 ಬಿಲಿಯನ್ ಇದೆ.
ಇದರ ಜೊತೆಗೆ ಗೌತಮ್ ಅದಾನಿ ಏಷ್ಯಾ ಹೀರೋಸ್ ಆಫ್ ಫಿಲಾಂತ್ರಪಿ 2022 ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
BREAKING NEWS : ಬೆಳಗಾವಿಯಲ್ಲಿ ರೊಚ್ಚಿಗೆದ್ದ ರೈತರು : B.S ಯಡಿಯೂರಪ್ಪ ವಿರುದ್ಧ ‘ಧಿಕ್ಕಾರ’ ಘೋಷಣೆ