ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನವು ನಿಗದಿತ ಸಮಯಕ್ಕಿಂತ ಒಂದು ವಾರ ಮುಂಚಿತವಾಗಿ ಶುಕ್ರವಾರ ಕೊನೆಗೊಳ್ಳಬಹುದು ಎಂದು ಮೂಲಗಳು ಇಂದು ತಿಳಿಸಿವೆ. ಲೋಕಸಭೆ ಮತ್ತು ರಾಜ್ಯಸಭೆಯ ವೇಳಾಪಟ್ಟಿಯನ್ನ ನಿರ್ವಹಿಸುವ ವ್ಯವಹಾರ ಸಲಹಾ ಸಮಿತಿಯ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಡಿಸೆಂಬರ್ 7ರಂದು ಪ್ರಾರಂಭವಾದ ಚಳಿಗಾಲದ ಅಧಿವೇಶನವು, ಗದ್ದಲ, ವಾಗ್ವಾದಗಳ ಹಿನ್ನೆಲೆಯಲ್ಲಿ ಆಗಾಗ್ಗೆ ಮುಂದೂಡಿಕೆಗಳನ್ನ ಕಂಡಿದೆ. ಸಧ್ಯ ಇದೇ ಹಿನ್ನೆಲೆಯಲ್ಲಿ ಒಂದು ನಿಗದಿತ ವೇಳೆಗಿಂತ ಒಂದು ವಾರ ಮೊದ್ಲೇ ಅಧಿವೇಶನ ಕೊನೆಯಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.