ಬೆಳಗಾವಿ : ಬೆಳಗಾವಿ ಸುವರ್ಣಸೌಧದಲ್ಲಿ ಸಾವರ್ಕರ್ ಫೋಟೋ ಅಳವಡಿಕೆ ವಿಚಾರದ ಕುರಿತಂತೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ತೀರ್ಮಾನ ಕೈಗೊಂಡಾಗ ಕತ್ತಿನ ಪಟ್ಟಿ ಹಿಡಿಯಲು ಆಗಲ್ಲ. ಸಾರ್ವಕರ್ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿಗೆ ಹೋದವರಲ್ಲ. ಸಾವರ್ಕರ್ ಕೊಲೆ ಮಾಡಿ ಜೈಲಿಗೆ ಹೋದವರು. ನಾವು ನಾಗ್ಪುರ ಯೂನಿವರ್ಸಿಟಿಯವರಲ್ಲ ಎಂದು ಕಿಡಿಕಾರಿದ್ದಾರೆ.
ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಪತ್ರ ಕೊಟ್ಟು ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡುತ್ತಿದ್ದರು. ಸಾವರ್ಕರ್ ಫೋಟೋ ಹಾಕಿ ರಾಜ್ಯದ ಜನರಿಗೆ ಅವಮಾನ ಮಾಡಲಾಗಿದೆ. ಸಾವರ್ಕರ್ ಫೋಟೋ ನೋಡಿ ನಗಬೇಕೋ, ಅಳಬೇಕೋ ಗೊತ್ತಾಗುತ್ತಿಲ್ಲ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.