ಬೆಳಗಾವಿ: ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಎರಡು ದಿನ ನಡೆಯುತ್ತಿದೆ. ಈ ನಡುವೆಯೇ ಸಚಿವ ಸ್ಥಾನ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಭೆ ನಡೆಸಿ ಬೆಳಗಾವಿಯಿಂದ ಶಾಸಕ ಕೆ ಎಸ್ ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಬಂದಿದ್ದಾರೆ.
BIGG NEWS: ಬೆಳಗಾವಿ ಸುವರ್ಣಸೌಧದತ್ತ ಪಂಚಮಸಾಲಿ ಸಮಾಜದ ಪಾದಯಾತ್ರೆ: ಅಧಿವೇಶನದ ಎರಡನೇ ದಿನವೂ ಸರಣಿ ಪ್ರತಿಭಟನೆ
ಇನ್ನು ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣದಲ್ಲಿ ಭಾಗಿಯಾಗಿದ್ದರಿಂದ ಸಚಿವ ಸಂಪುಟದಿಂದ ಕೈಬಿಡಲಾಗಿತ್ತು. ಗ್ರಾಮ ಪಂಚಾಯಿತಿ ಗುತ್ತೇದಾರ್ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಎಸ್ ಈಶ್ವರಪ್ಪ ಸಚಿವ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಆದರೆ ಇದೀಗ ಇಬ್ಬರು ಹಿರಿಯ ಶಾಸಕರು ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದಾರೆ. ಈ ಹಿನ್ನೆಲೆ ಸಚಿವ ಸಂಪುಟ ಸ್ಥಾನ ಪಡೆಯಲು ಸಿ ಪಿ ಯೋಗೇಶ್ವರ್ ಜೊತೆಗೆ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕೆ ಎಸ್ ಈಶ್ವರಪ್ಪ ಹರಸಾಹಸ ಪಡುತ್ತಿದ್ದಾರೆ.
ಇನ್ನು ಸಚಿವ ಸ್ಥಾನ ಸಿಗದ ಹಿನ್ನೆಲೆ ಸಿಎಂ ಹಾಗೂ ಹೈಕಮಾಂಡ್ ಮೇಲೆ ಈಶ್ವರಪ್ಪ ಈಗಾಗಲೇ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಜೊತೆಗೆ ಸಚಿವ ಸ್ಥಾನ ಸಿಗುವವರೆಗೆ ಅಧಿವೇಶನಕ್ಕೆ ಹಾಜರಾಗಲ್ಲ ಎಂದು ಕೂಡ ಈಶ್ವರಪ್ಪ ತಿಳಿಸಿದ್ದಾರೆ.