ಗುಜರಾತ್ : ಗುಜರಾತ್ನ ಸೂರತ್ನಲ್ಲಿರುವ ಢಾಬಾ (ರಸ್ತೆ ಬದಿಯ ರೆಸ್ಟೊರೆಂಟ್)ಗೆ ವೇಗವಾಗಿ ಬಂದ ಬೊಲೆರೊ ಪಿಕ್ಅಪ್ ವಾಹನವೊಂದು ಡಿಕ್ಕಿ ಹೊಡೆದಿದ್ದು, ಅಲ್ಲಿ ಊಟ ಮಾಡುತ್ತಿದ್ದವರು ಪ್ರಾಣಾಪಾಯದಿಂದ ಪಾರಾಗುತ್ತಿದ್ದಾರೆ. ಈ ಆಘಾತಕಾರಿ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಈ ವಿಡಿಯೋ ವೈರಲ್ ಆಗಿದೆ
सूरत:
क्या इस तरह भी दुर्घटना होती है… pic.twitter.com/7daOHqLrcI— Raghvendra Pandey🇮🇳 (@bhaiyaji25) December 19, 2022
ಸೂರತ್ನ ಸರೋಲಿ ಪ್ರದೇಶದಲ್ಲಿನ ರಸ್ತೆಬದಿಯ ಧಾಬಾಗೆ, ವೇಗವಾಗಿ ಬಂದ ಬೊಲೆರೊ, ವಾಹನದ ನಿಯಂತ್ರಣವನ್ನು ಕಳೆದುಕೊಂಡು, ರೆಸ್ಟೋರೆಂಟ್ಗೆ ಡಿಕ್ಕಿ ಹೊಡೆದು ಗೋಡೆ ಮತ್ತು ಇತರ ಪೀಠೋಪಕರಣಗಳನ್ನು ಒಡೆದುಹೋಗಿದೆ. ನಂತರ ವೇಗವಾಗಿ ಬಂದ ವಾಹನವು ರೆಸ್ಟೋರೆಂಟ್ನಲ್ಲಿ ಒಂದು ಟೇಬಲ್ಗೆ ಡಿಕ್ಕಿ ಹೊಡೆದಿದೆ, ಅಲ್ಲಿ ಆಹಾರ ಸೇವಿಸುತ್ತಿದ್ದ ಸುಮಾರು ಎರಡರಿಂದ ಮೂರು ಮಂದಿ ಗಾಯಗೊಂಡಿದ್ದಾರೆ.