ಕೆಎನ್ಎನ್ಡಿಜಿಟಲ್ ಡೆಸ್ಕ್ : ದೇಶದ ಮೊದಲ ಡ್ರೋನ್ ಪ್ರದರ್ಶನ ಸೋಮವಾರ ಸಂಜೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ನಡೆಯಿತು. ಉತ್ತರ ಪ್ರದೇಶ ಸರ್ಕಾರವು ಕಾಕೋರಿ ಘಟನೆಯ ತ್ಯಾಗದ ನೆನಪಿಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು. ಈ ಸಂದರ್ಭದಲ್ಲಿ 750 ಡ್ರೋನ್’ಗಳನ್ನ ಹೊಂದಿರುವ ಪ್ರದರ್ಶನ ನೀಡಲಾಯ್ತು. ಈ ಸಂದರ್ಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕೇಂದ್ರ ಸಂಸ್ಕೃತಿ ಖಾತೆ ರಾಜ್ಯ ಸಚಿವೆ ಮೀನಾಕ್ಷಿ ಲೇಖಿ ಮತ್ತು ಪ್ರವಾಸೋದ್ಯಮ ಸಚಿವ ಜೈವೀರ್ ಸಿಂಗ್ ಉಪಸ್ಥಿತರಿದ್ದರು.
ಗೋರಖ್ಪುರದಲ್ಲಿ ತ್ಯಾಗ ದಿನ ಆಚರಣೆ.!
ಮಾಹಿತಿಯ ಪ್ರಕಾರ, ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನಡೆದ ಕಾಕೋರಿ ರೈಲು ಘಟನೆಯ ಕ್ರಾಂತಿಕಾರಿಗಳ ನೆನಪಿಗಾಗಿ ಉತ್ತರ ಪ್ರದೇಶ ಸರ್ಕಾರವು ಡಿಸೆಂಬರ್ 15 ರಿಂದ 19 ರವರೆಗೆ ಕಾಕೋರಿ ತ್ಯಾಗ ದಿನವನ್ನ ಆಚರಿಸುತ್ತಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ, ಗೋರಖ್ಪುರದ ಮಹಾಂತ್ ದಿಗ್ವಿಜಯ್ನಾಥ್ ಉದ್ಯಾನವನದಲ್ಲಿ ಡ್ರೋನ್ ಪ್ರದರ್ಶನವನ್ನ ಆಯೋಜಿಸಲಾಗಿತ್ತು. ಇದು ದೇಶದ ಮೊದಲ ಬೃಹತ್ ಡ್ರೋನ್ ಪ್ರದರ್ಶನ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಮರ ಹುತಾತ್ಮರ ವೀರೋಚಿತ ಕಥೆ.!
ಈ ಡ್ರೋನ್ ಪ್ರದರ್ಶನದಲ್ಲಿ, ಅಮರ್ ಶಹೀದ್ ಬಂಧು ಸಿಂಗ್, ಪಂಡಿತ್ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಫಾಕುಲ್ಲಾ ಖಾನ್, ಠಾಕೂರ್ ರೋಷನ್ ಸಿಂಗ್ ಅವರಂತಹ ಕ್ರಾಂತಿಕಾರಿಗಳ ಚಿತ್ರಗಳನ್ನು ದೀಪಗಳ ಮೂಲಕ ತೋರಿಸಲಾಯಿತು.
गोरखपुर में 'आजादी का अमृत महोत्सव' के अंतर्गत 'काकोरी बलिदान दिवस' के अवसर पर आयोजित भव्य ड्रोन शो कार्यक्रम में… https://t.co/Tvvq8pI4DD
— Yogi Adityanath (@myogiadityanath) December 19, 2022
BIGG NEWS : ಗ್ರಾಹಕರಿಗೆ ಬಿಗ್ ಶಾಕ್ : ತರಕಾರಿ ಬೆಲೆಯಲ್ಲಿ ಭಾರೀ ಏರಿಕೆ!
ನೆಚ್ಚಿನ ವ್ಯಕ್ತಿಯ ಫೋಟೋ ಇರುವ ‘ಟಿ-ಶರ್ಟ್’ ಧರಿಸೋದ್ರಿಂದ ‘ಧಾರ್ಮಿಕ ಅಶಾಂತಿ’ ಉಂಟಾಗೋದಿಲ್ಲ: ಪಂಜಾಬ್ ಹೈಕೋರ್ಟ್