ಭೋಪಾಲ್: ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ನಂತರ, ರಾಜ್ಯದ ವಿಧಾನಸಭಾ ಸ್ಪೀಕರ್ ಗಿರೀಶ್ ಗೌತಮ್ ಸಹ ನಟ ಶಾರುಖ್ ಖಾನ್ ಅವರ ಚಲನ ಚಿತ್ರ ಪಠಾನ್ ಅನ್ನು ವಿರೋಧಿಸಿದ್ದಾರೆ.
“ಶಾರುಖ್ ತಮ್ಮ ಮಗಳೊಂದಿಗೆ ಈ ಚಿತ್ರವನ್ನು ನೋಡಬೇಕು, ಆ ಚಿತ್ರವನ್ನು ಅಪ್ಲೋಡ್ ಮಾಡಬೇಕು ಮತ್ತು ಅವರು ತಮ್ಮ ಮಗಳೊಂದಿಗೆ ಅದನ್ನು ನೋಡುತ್ತಿದ್ದಾರೆ ಎಂದು ಜಗತ್ತಿಗೆ ಹೇಳಬೇಕು” ಎಂದು ಅವರು ಹೇಳಿದ್ದಾರೆನಾನು ಬಹಿರಂಗವಾಗಿ ಹೇಳಲು ಬಯಸುತ್ತೇನೆ – ಪ್ರವಾದಿ ಮುಹಮ್ಮದ್ ಅವರ ಬಗ್ಗೆ ಅಂತಹ ಒಂದು ಚಲನಚಿತ್ರವನ್ನು ಮಾಡಿ ಮತ್ತು ಅದನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬಿಡುಗಡೆ ಮಾಡಿ. ಪ್ರಪಂಚದಾದ್ಯಂತ ರಕ್ತಪಾತ ನಡೆಯುತ್ತದೆ ಅಂತ ಅವರು ಹೇಳಿದ್ದಾರೆ. ಚಿತ್ರಮಂದಿರಗಳಲ್ಲಿ ‘ಪಠಾನ್’ ಚಿತ್ರವನ್ನು ನಿಷೇಧಿಸಬೇಕೆಂಬ ಬೇಡಿಕೆಗಳ ನಡುವೆಯೇ ಇಂದಿನಿಂದ ಆರಂಭವಾಗಲಿರುವ ಐದು ದಿನಗಳ ಚಳಿಗಾಲದ ಅಧಿವೇಶನಕ್ಕೂ ಮುನ್ನ ಗೌತಮ್ ಈ ವಿಷಯ ತಿಳಿಸಿದರು. ಈ ವಿಷಯವನ್ನು ಆಡಳಿತಾರೂಢ ಬಿಜೆಪಿ ಸದನದಲ್ಲಿ ಚರ್ಚಿಸುವ ಸಾಧ್ಯತೆಯಿದೆ.