ನವದೆಹಲಿ : ಅರುಣಾಚಲ ಪ್ರದೇಶದ ತವಾಂಗ್ನಲ್ಲಿ ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ರಾಜಕೀಯ ಮುಂದುವರೆದಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಚೀನಾವನ್ನ ಕಡಿಮೆ ಅಂದಾಜು ಮಾಡಿದ್ದಾರೆ ಎಂದು ಆರೋಪಿಸಿದ್ದು, ಸಧ್ಯ ರಾಹುಲ್ ಗಾಂಧಿಗೆ ಜೈಶಂಕರ್ ತಿರುಗೇಟು ನೀಡಿದ್ದಾರೆ.
ಜೈಶಂಕರ್, “ಎಲ್ಎಸಿಯಲ್ಲಿ ಚೀನಾಕ್ಕೆ ಪ್ರತ್ಯುತ್ತರ ನೀಡಲು ಭಾರತೀಯ ಸೇನೆಯು ಇದುವರೆಗೆ ಅತಿದೊಡ್ಡ ನಿಯೋಜನೆಯನ್ನ ಮಾಡಿದೆ” ಎಂದು ಹೇಳಿದರು. ಮಾಧ್ಯಮ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಭಾರತದ ವಿದೇಶಾಂಗ ಸಚಿವರು ಈ ವಿಷಯ ತಿಳಿಸಿದರು. 2020ರಿಂದೀಚೆಗೆ ಎಲ್ಎಸಿಯಲ್ಲಿ ಚೀನಾದ ಸೈನಿಕರ ಸಂಖ್ಯೆ ಹೆಚ್ಚಿದೆ, ಆದ್ದರಿಂದ ಭಾರತೀಯ ಸೇನೆಯೂ ದೊಡ್ಡ ಪ್ರಮಾಣದಲ್ಲಿ ಸೈನ್ಯವನ್ನ ನಿಯೋಜಿಸಿದೆ ಎಂದು ಜೈಶಂಕರ್ ಸುದ್ದಿಗಾರರಿಗೆ ತಿಳಿಸಿದರು.
ರಾಹುಲ್ ಗಾಂಧಿ ವಿರುದ್ಧ ಜೈಶಂಕರ್ ಪ್ರತಿದಾಳಿ
ಚೀನಾದ ಕಡೆಯಿಂದ ಏಕಪಕ್ಷೀಯ ಬದಲಾವಣೆಯ ಯಾವುದೇ ಪ್ರಯತ್ನವನ್ನ ಎದುರಿಸಲು ನಮ್ಮ ಸೇನೆಯನ್ನ ನಿಯೋಜಿಸಲಾಗಿದೆ ಹೇಳಿದರು. ಇದು ಭಾರತೀಯ ಸೇನೆಯ ಬದ್ಧತೆಯಾಗಿದೆ. ಈ ವಿಚಾರದಲ್ಲಿ ನಾವು ಗಂಭೀರವಾಗಿರದಿದ್ದರೆ ಸೇನೆಯನ್ನ ಅಲ್ಲಿಗೆ ನಿಯೋಜಿಸುತ್ತಿರಲಿಲ್ಲ’ ಎಂದು ಅವರು ಹೇಳಿದರು. ರಾಹುಲ್ ಗಾಂಧಿಗೆ ತಿರುಗೇಟು ನೀಡಿದ ಜೈಶಂಕರ್, “ಎಲ್ಎಸಿಯಲ್ಲಿರುವ ಭಾರತೀಯ ಸೇನೆಯ ಸೈನಿಕರು ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಹೋಗಲಿಲ್ಲ, ಆದರೆ ನಮ್ಮ ಪ್ರಧಾನಿಯವರ ಆದೇಶದ ಮೇರೆಗೆ ಹೋಗಿದ್ದಾರೆ” ಎಂದು ಹೇಳಿದರು.
Shocking Video : ವಿದೇಶಿ ಮಹಿಳೆ ರಂಪಾಟ, ನಗ್ನಳಾಗಿ ಕೋಣೆಯಿಂದ ಹೊರ ಬಂದು ಹೊಟೇಲ್ ಸಿಬ್ಬಂದಿ ಮೇಲೆ ಹಲ್ಲೆ