ಬೆಂಗಳೂರು : ಕಾಂತಾರ ಚಿತ್ರ ಎಷ್ಟು ಹಿಟ್ ಆಗಿತ್ತು ಅನ್ನೋದು ಗೊತ್ತೇ ಇದೆ. ಈ ಸಿನಿಮಾ ತೆರೆಕಂಡು ತಿಂಗಳುಗಳೇ ಕಳೆದ್ರೂ ಇಂಡಸ್ಟ್ರಿಯಲ್ಲಿ ಟಾಫ್ ಸ್ಥಾನದಲ್ಲಿದೆ. ಆದ್ರೆ, ಇತ್ತೀಚೆಗೆ ಪರೀಕ್ಷೆ ಪತ್ರಿಕೆಯೊಂದರಲ್ಲಿ ಕಾಂತಾರನಿಗೆ ಸಂಬಂಧಿಸಿದ ಪ್ರಶ್ನೆ ಕೇಳಲಾಗಿದ್ದು, ಸಧ್ಯ ಇದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ರಿಷಬ್ ಶೆಟ್ಟಿ ನಿರ್ದೇಶನ, ಚಿತ್ರಕಥೆ ಮತ್ತು ಅಭಿನಯದ ಕಾಂತಾರ ದೊಡ್ಡ ಯಶಸ್ಸನ್ನ ಕಂಡಿತು. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲಿಯೂ ಈ ಚಿತ್ರ ಭಾರೀ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದೆ. ಸದ್ಯ ಈ ಸಿನಿಮಾ ಎಲ್ಲೆಡೆ ಚರ್ಚೆಯಾಗುತ್ತಿದೆ.
ಕಾಂತಾರ ಹವಾ ಈಗ ಶಿಕ್ಷಣ ಕ್ಷೇತ್ರಕ್ಕೂ ಕಾಲಿಟ್ಟಿದ್ದು, ಇತ್ತೀಚೆಗಷ್ಟೇ ಪರೀಕ್ಷಾ ಪತ್ರಿಕೆಯಲ್ಲಿ ಕಾಂತಾರ ಪ್ರಶ್ನೆಯೊಂದು ವೈರಲ್ ಆಗುತ್ತಿದೆ. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಹೌದು, ಕಾಂತಾರ ಸಿನಿಮಾದ ಬಗ್ಗೆ ಪ್ರಶ್ನೆ ಕೇಳಿರುವ ಪರೀಕ್ಷಾ ಪತ್ರಿಕೆಯ ಫೋಟೋ ವೈರಲ್ ಆಗಿದೆ. ಇತ್ತೀಚೆಗೆ ಬಿಡುಗಡೆಯಾದ ಕಾಂತಾರ ಸಿನಿಮಾ ಯಾವುದನ್ನ ಆಧರಿಸಿದೆ ಎಂಬ ಪ್ರಶ್ನೆ ಕೇಳಲಾಗಿದ್ದು, ಜಲ್ಲಿಕಟ್ಟು, ಭೂತಕೋಲ, ಯಕ್ಷಗಾನ, ದಮ್ಮಾಮಿ ಅನ್ನೋ ಆಯ್ಕೆಗಳನ್ನ ನೀಡಲಾಗಿದೆ.
ಈ ಪ್ರಶ್ನೆ ಪತ್ರಿಕೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದು, ಕರ್ನಾಟಕ ಹಾಲು ಮಹಾಮಂಡಳ ಇಲಾಖೆ ಇತ್ತೀಚೆಗೆ ನಡೆಸಿದ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಈ ಪ್ರಶ್ನೆಯನ್ನ ಕೇಳಲಾಗಿದೆ. ಇದಕ್ಕೆ ಸಂಬಂಧಿಸಿದ ಚಿತ್ರವನ್ನ ಕಾಂತಾರ ನಾಯಕಿ ಸಪ್ತಮಿ ಗೌಡ ತಮ್ಮ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಅಂದ್ಹಾಗೆ, ಕಾಂತಾರ ಚಿತ್ರ ಬಾಕ್ಸ್ ಆಫೀಸ್’ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ್ದು, ಮಲಯಾಳಂ, ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ಚಿತ್ರ ಬಿಡುಗಡೆಯಾಗಿತ್ತು. ಈ ಚಿತ್ರಕ್ಕೆ ದೇಶಾದ್ಯಂತ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಹಿಂದಿಯಲ್ಲಿ 75 ಕೋಟಿ ಹಾಗೂ ತೆಲುಗಿನಲ್ಲಿ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.
ಇಂದಿನಿಂದ ‘ಸವರನ್ ಗೋಲ್ಡ್ ಬಾಂಡ್ 3ನೇ ಸರಣಿ’ ಆರಂಭ ; ಬೆಲೆ, ಬಡ್ಡಿ ದರ, ಖರೀದಿಸೋದು ಹೇಗೆ.? ಇಲ್ಲಿದೆ ಮಾಹಿತಿ
ಮೊಬೈಲ್ ಮೂಲಕ ವೋಟರ್ ಐಡಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ