ಬೆಂಗಳೂರು: ಆಂಧ್ರಪದೇಶದ ಕಳ್ಳತನ ಬಂಗಾರ ಖರೀದಿ ಪ್ರಕರಣ ಹಾಗೂ ಎರಡನೇ ಪತ್ನಿ ವರದಕ್ಷಿಣೆ ಕಿರುಕುಳ ಆರೋಪ ಹಿನ್ನೆಲೆಯಲ್ಲಿ ಅಟ್ಟಿಕಾ ಬಾಬು ಬಂಧನವಾಗಿತ್ತು ಎಂದು ಹೇಳಲಾಗಿತ್ತು. ಆದರೆ ಈ ಎರಡು ಆರೋಪಗಳು ಸುಳ್ಳು ಎಂದು ಅಟ್ಟಿಕಾ ಬಾಬು ಅವರು ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಮೂವರು ಮಕ್ಕಳನ್ನು ಸಾಕಿಕೊಂಡಿದ್ದೆ. ಅಣ್ಣನ ಮಗನನ್ನು ನಾನು ಎಂಬಿಬಿಎಸ್ ಓದಿಸಿದ್ದೇನೆ.ಮೇಯರ್ ಮಗಳಿಗೆ ಅಣ್ಣನ ಮಗನನ್ನ ಮದುವೆ ಮಾಡಿಸಿದ್ದೆ. ಆದರೆ ಅವರ ಕುಟುಂಬದಲ್ಲಿ ವೈಮನಸ್ಸು ಉಂಟಾಗಿತ್ತು. ಅಣ್ಣನ ಮಗನ ಪತ್ನಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ದೂರಿನಲ್ಲಿ ನನ್ನ ಹಾಗೂ ನನ್ನ ಪತ್ನಿ, ಮಕ್ಕಳ ಹೆಸರನ್ನು ಉಲ್ಲೇಖಿಸಿದ್ದರು. ಹಾಗಾಗಿ ಅನಂತಪುರದಿಂದ ಪೊಲೀಸರು ಬಂದು ಜೊತೆಗೆ ಬರಬೇಕು ಅಂತಾ ಕರೆದುಕೊಂಡು ಹೋದರು, ನಾನು ಕುಟುಂಬ ಸಮೇತವಾಗಿ ಉತ್ತರಿಸಿ ಬಂದಿದ್ದೇನೆ ಎಂದರು.