ಚಿತ್ರದುರ್ಗ : ರಾಜ್ಯ ಸರ್ಕಾರದಿಂದ ಮುಂದಿನ ಬಜೆಟ್ನಲ್ಲಿ ‘ಓಬವ್ವ’ ಹೆಸರಿನಲ್ಲಿ ನಿಗಮ ಸ್ಥಾಪನೆ ಮಾಡಿ, ಮಹಿಳೆಯರ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಚಿತ್ರದುರ್ಗ ನಗರದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯದ ಯಾವುದಾದರೂ ವಿಶ್ವವಿದ್ಯಾನಿಲಯದಲ್ಲಿ ಓಬವ್ವ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪನೆ ಮಾಡಲಾಗುವುದು. ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯದಲ್ಲಿ 100 ಅಂಬೇಡ್ಕರ್ ಹಾಗೂ 50 ಕನಕ ವಿದ್ಯಾರ್ಥಿ ನಿಲಯ ಸ್ಥಾಪನೆ ಮಾಡಲಾಗುವುದು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮೂಲಕ 224 ವಿಧಾನ ಸಭಾ ಕ್ಷೇತ್ರಗಳಲ್ಲಿಗೂ ಪ್ರತಿ ಕ್ಷೇತ್ರಕ್ಕೆ 100 ಯುವಕರಿಗೆ ಉದ್ಯೋಗಕ್ಕಾಗಿ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಚಿತ್ರದುರ್ಗ ನಗರದಲ್ಲಿ 80 ಎಕರೆ ಜಾಗವನ್ನು ಒನಕೆ ಓಬವ್ವ ಟ್ರಸ್ಟ್ಗೆ ಮಂಜೂರು ಮಾಡಲು ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಕ್ರಮ ವಹಿಸಲಾಗುವುದು. ರಾಜ್ಯದ ಅಭಿವೃದ್ಧಿಯಲ್ಲಿ ಎಲ್ಲ ಸಮುದಾಯಗಳ ಕೊಡುಗೆ ಅಪಾರವಾಗಿದೆ. ಚಿಕ್ಕಂದಿನಲ್ಲಿ ನನ್ನ ತಾಯಿ ಒನಕೆ ಓಬವ್ವ ಕಥೆ ಹೇಳುತ್ತಿದ್ದರು. ಅಧಿಕಾರ ಇದ್ದವರು ಸಾಧನೆ ಮಾಡುವುದು ಸಹಜ. ಆದರೆ ಅಧಿಕಾರ ಇಲ್ಲದೇ ಒನಕೆ ಓಬವ್ವ ಸಾಧನೆ ಮಾಡಿದ್ದಾಳೆ. ಅವಳ ಹೋರಾಟ ಹಾಗೂ ತ್ಯಾಗ ಸುವರ್ಣಾಕ್ಷರದಲ್ಲಿ ಬರೆಯಬೇಕು. ಗೃಹಿಣಿಯಾಗಿ ಪತಿ ಊಟ ಮಾಡುವಾಗ ಎಬ್ಬಿಸಬಾರದು ಎಂಬ ಸಂಪ್ರದಾಯಕ್ಕೆ ತಲೆಬಾಗಿ, ವೈರಿ ಹೈದರಾಲಿ ಸೇನೆಯ ರುಂಡ ಚಂಡಾಡಿದಳು. ಓಬವ್ವನ ಕಥೆ ನಮ್ಮೆಲ್ಲರಿಗೂ ಪ್ರೇರಣೆ. ಕಿತ್ತೂರು ಚೆನ್ನಮ್ಮ, ಕೆಳದಿ ಚನ್ನಮ್ಮ, ಉಳ್ಳಾಲದ ಅಬ್ಬಕ್ಕ ನಮಗೆ ಆದರ್ಶಪ್ರಾಯರು. ಮಹಿಳೆಯರ ಸಾಧನೆ ಇತಿಹಾಸ ಪುಟಗಳಲ್ಲಿ ನೋಡಿದರೆ ಮಹಿಳೆಯರು ಅಬಲೆಯರಲ್ಲ ಎಂಬುದು ಸಾಬೀತು ಆಗುತ್ತದೆ. ಓಬವ್ವನಿಂದ ಕರ್ತವ್ಯ ನಿμÉ್ಠ, ದೇಶ ಪ್ರೇಮ ತ್ಯಾಗಗಳ ಗುಣ ಕಲಿಯಬೇಕು. ಈ ಗುಣಗಳು ಛಲವಾದಿ ಸಮುದಾಯದಲ್ಲಿ ಬಹಳ ಹಿಂದಿನಿಂದ ಬೆಳದು ಬಂದಿವೆ. ಇವು ಓಬವ್ವನಲ್ಲಿ ಅಂತರ್ಗತ ಇದ್ದು ಸಾಧನೆಗೆ ಪ್ರೇರೇಪಿಸಿವೆ ಎಂದು ಹೇಳಿದರು.
ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟು, ಬದ್ಧನಾಗಿ ಕೆಲಸ ಮಾಡುತ್ತಿದ್ದೇನೆ. ಬುದ್ಧ, ಬಸವ, ಅಂಬೇಡ್ಕರ್ ಗಾಂಧಿ, ವಾಲ್ಮೀಕಿ ನನಗೆ ಆದರ್ಶಪ್ರಾಯರು. ಅಂಬೇಡ್ಕರ್ ಅವರು ಸಮಾಜದ ಎಲ್ಲಾ ಸಮುದಾಯಗಳಿಗೆ ಅವಕಾಶ ಕೊಡಬೇಕು ಎಂದು ಸಂವಿಧಾನದ ಪ್ರಸ್ತಾವನೆಯಲ್ಲಿ ತಿಳಿಸಿದ್ದಾರೆ. ಸಂವಿಧಾನ ದೇಶದ 130 ಕೋಟಿ ಜನರು ಒಟ್ಟಾಗಿರಲು ಕಾರಣ. ಛಲವಾದಿ ಸಮುದಾಯದಲ್ಲಿ ಪ್ರತಿಭೆಗೆ ಕೊರತೆ ಇಲ್ಲ. ಅವಕಾಶಗಳ ಕೊರತೆ ಇದೆ. ಅವಕಾಶ ಕೊಟ್ಟರೆ ರಾಜ್ಯ ಕಟ್ಟಬಹುದು ರಾಜ್ಯ ಆಳ್ವಿಕೆ ಮಾಡಬಹುದು ಎಂದರು. ಎರಡು ತರಹದ ರಾಜಕಾರಣ ಇದೆ, ಒಂದು ಅಧಿಕಾರದ ರಾಜಕಾರಣ, ಇನ್ನೊಂದು ಜನ ರಾಜಕಾರಣ. ಜನರ ಸೇವೆಯನ್ನು ನಿμÉ್ಠಯಿಂದ ಮಾಡಿದರೆ ಜನರು ನಮ್ಮನ್ನು ನಾಯಕರನ್ನಾಗಿ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.
ಹಾವೇರಿ ಶಾಸಕರು ಹಾಗೂ ರಾಜ್ಯ ಅನುಸೂಚಿತ ಜಾತಿ ಮತ್ತು ಬುಡಕಟ್ಟುಗಳ ಆಯೋಗದ ಅಧ್ಯಕ್ಷ ನೆಹರು ಚ. ಓಲೇಕಾರ್ ಮಾತನಾಡಿ, ರಾಜ್ಯಮಟ್ಟದ ಒನಕೆ ಓಬವ್ವ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ರೂ.2 ಕೋಟಿ ಅನುದಾನ ನೀಡಿದೆ. ವೀರವನಿತೆ ಒನಕೆ ಓಬವ್ವ ಪ್ರಾಧಿಕಾರದ ರಚನೆ ಮಾಡಬೇಕು. ಅದರ ಜೊತೆಗೆ ವೀರ ಒನಕೆ ಓಬವ್ವ ಟ್ರಸ್ಟ್ಗೆ 80 ಎಕರೆ ಜಮೀನನ್ನು ಮಂಜೂರು ಮಾಡಿ ಕೊಡಬೇಕು ಎಂದು ವಿನಂತಿಸಿದರು. ಚಿತ್ರದುರ್ಗದಲ್ಲಿ ವೀರ ವನಿತೆ ಒನಕೆ ಓಬವ್ವರ ಹೆಸರಿನಲ್ಲಿ ವಿಶ್ವ ವಿದ್ಯಾಲಯ ಸ್ಥಾಪನೆಯಾಗಬೇಕು ಎಂಬುದು ಸಮಾಜದ ಕೋರಿಕೆಯಾಗಿದ್ದು, ಇದನ್ನು ಪೂರ್ಣಗೊಳಿಸಬೇಕು. ಚಿತ್ರದುರ್ಗ ನಗರದ ಪ್ರಥಮ ದರ್ಜೆ ಮಹಿಳಾ ಕಾಲೇಜಿಗೆ ಒನಕೆ ಓಬವ್ವನ ಹೆಸರಿಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಒನಕೆ ಓಬವ್ವ ಹಸರಿನಲ್ಲಿ ಮಹಿಳಾ ಕಾಲೇಜು ಮತ್ತು ಮಹಿಳಾ ಪ್ರೌಢಶಾಲೆಗಳನ್ನು ಸ್ಥಾಪನೆ ಮಾಡಬೇಕು. ಪ್ರತಿ ಜಿಲ್ಲೆಗೂ ಒನಕೆ ಓಬವ್ವ ಟ್ರಸ್ಟ್ಗೆ ಜಾಗ ಮಂಜೂರು ಮಾಡಬೇಕು. ಒನಕೆ ಒಬವ್ವ ಮೂರ್ತಿ ಸ್ಥಾಪಪಿಸಬೇಕು. ರಾಜ್ಯಮಟ್ಟದ ಒನಕೆ ಓಬವ್ವ ಪ್ರಶಸ್ತಿಯನ್ನೂ ಸ್ಥಾಪಿಸಬೇಕು. ಜೊತೆಗೆ ರಾಜ್ಯದ ಯಾವುದಾದರೂ ಒಂದು ಪ್ರದೇಶದಲ್ಲಿ ಅಗತ್ಯ ಜಮೀನು ಮಂಜೂರು ಮಾಡಿ 157 ಅಡಿ ಎತ್ತರದ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು ಮನವಿ ಮಾಡಿದರು. ಛಲವಾದಿ ಸಮಾಜ ಅತ್ಯಂತ ಹಿಂದುಳಿದ ಸಮಾಜವಾಗಿದ್ದು, ಅನೇಕ ವರ್ಷಗಳಿಂದ ತುಳಿತಕ್ಕೆ ಒಳಗಾಗಿದೆ. ಈ ಸಮಾಜವನ್ನು ಸರ್ಕಾರ ಎತ್ತಿ ಹಿಡಿಯಬೇಕಾಗಿದೆ ಎಂದರು.
ಹಂಪಿ ಕನ್ನಡ ವಿವಿ ಬುಡಕಟ್ಟು ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ಚೆಲುವರಾಜು ವಿಶೇಷ ಉಪನ್ಯಾಸ ನೀಡಿ, ಚಿತ್ರದುರ್ಗ ಜಿಲ್ಲೆ ಜನ ಸಾಮಾನ್ಯರ, ದುಡಿಯುವ ವರ್ಗದ ಜನರ ಹಾಗೂ ಎಲ್ಲ ಸಮಾಜದ ಸಾಮರಸ್ಯದ ಕೇಂದ್ರವಾಗಿದೆ. ಸಾಮಾಜಿಕ ಮತ್ತು ಸೌಹಾರ್ದ ಚರಿತ್ರೆ ಇಲ್ಲಿನ ಸ್ಥಳೀಯ ಚರಿತ್ರೆಗಳಲ್ಲಿದೆ. ಒನಕೆ ಓಬವ್ವ ಎಲ್ಲರಂತೆ ಸಾಮಾನ್ಯ ದುಡಿಯುವ ವರ್ಗದ ಮಹಿಳೆ. ಪಾಳೇಗಾರರ ಮನಸ್ಸು ಗೆದ್ದು ದೊಡ್ಡ ಅಸ್ತಿತ್ವ ಪಡೆದು ಜನಮಾನಸದಲ್ಲಿ ಉಳಿದವರು ಎಂದರು.
ಚರಿತ್ರೆಕಾರರು ರಕ್ತಸಿಕ್ತ ಚರಿತ್ರೆಯನ್ನು ವೈಭವದಿಂದ ಮೆರೆಸಿದರು. ಆದರೆ ದುಡಿಯುವ ವರ್ಗ, ಶೋಷಿತರ, ಶ್ರಮಿಕ ವರ್ಗದ ಪ್ರತೀಕವಾದ ಸ್ಥಳೀಯ ಸಂಸ್ಕøತಿ ಅನಾವರಣಗೊಳಿಸಲಿಲ್ಲ. ಸ್ಥಳೀಯ ಚರಿತ್ರೆಗಳು ಸಾಮ್ರಾಜ್ಯ ನಿರ್ಮಾಣದ ಊರುಗೋಲು. ಸ್ಥಳೀಯ ಚರಿತ್ರೆಯಿಂದ ಹೊಸ ಚರಿತ್ರೆ ನಿರ್ಮಾಣ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ತಳ ಸಮುದಾಯದ ಕುರಿತು ಅಧ್ಯಯನ ನಡೆದರೂ ಅದನ್ನು ಪಠ್ಯದಲ್ಲಿ ಅಳವಡಿಸುತ್ತಿಲ್ಲ. ಇನ್ನು ಮುಂದೆಯಾದರೂ ಶಿಕ್ಷಣ ವ್ಯವಸ್ಥೆಯಲ್ಲಿ ಅಳವಡಿಸಬೇಕು ಎಂದರು.
ಕೊಳ್ಳೆಗಾಲ ಶಾಸಕ ಎನ್.ಮಹೇಶ್ ಮಾತನಾಡಿ, ವೀರ ವನಿತೆ ಒನಕೆ ಓಬವ್ವ ರಕ್ಷಣೆ ಮತ್ತು ಭದ್ರತೆ, ಪ್ರಾಮಾಣಿಕತೆ, ಸ್ವಾಭಿಮಾನ, ನಂಬಿಕೆ, ನಿμÉ್ಠ, ಧೈರ್ಯ ಹಾಗೂ ಸಾಹಸದ ಸಂಕೇತ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ , ಇಂದಿನ ಸಮಾರಂಭ ಇತಿಹಾಸ ಸೃಷ್ಟಿ ಮಾಡಿದೆ. ನಮ್ಮೆಲ್ಲರ ಅವ್ವ ಒನಕೆ ಓಬವ್ವ. ಅವರನ್ನು ನೆನಪಿಸಿಕೊಳ್ಳಲು ಇತಿಹಾಸ ಸ್ಮರಿಸಿಕೊಳ್ಳಲು ಇಲ್ಲಿಗೆ ಬಂದಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮುಚ್ಚಿಡಲ್ಪಟ್ಟ ಒಬವ್ವ ಚರಿತ್ರೆಯನ್ನು ಜಗತ್ತಿಗೆ ಪರಿಚಿಸಲು ಜಯಂತಿ ಆಚರಣೆಗೆ ಮುಂದಾಗಿದ್ದಾರೆ. ಛಲವಾದಿ ಸಮಾಜದ ಅಸ್ಮಿತೆ ವೀರವನಿತೆ ಓಬವ್ವ ಒಂದು ದಿನದಲ್ಲೇ ಸಮುದಾಯಕ್ಕೆ ದೊಡ್ಡ ಚರಿತ್ರೆ ಕೊಟ್ಟು ಹೋಗಿದ್ದಾಳೆ. ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ದೇಶದ ಜನರಲ್ಲಿ ಸಮಾನತೆ ಆಶಯದೊಂದಿಗೆ ಸಂವಿಧಾನ ರಚನೆ ಮಾಡಿದ್ದಾರೆ. ಇಂದಿಗೂ ನಾವು ಕೀಳರಿಮೆಯಿಂದ ಛಲವಾದಿ ಎಂದು ಹೇಳಲು ಹಿಂಜರಿಯುತ್ತೇವೆ. ಆದರೆ ಛಲವಾದಿಗಳು ಎಂಬುದು ಶಕ್ತಿ ಹಾಗೂ ಹಠದ ಸಂಕೇತವಾಗಿದೆ. ಹೆಣ್ಣು ಮಕ್ಕಳು ಒನಕೆ ಓಬವ್ವನ ರೀತಿಯಲ್ಲಿ ಬದುಕಬೇಕು. ಕಾಲೇಜು ಹಾಗೂ ಹಾಸ್ಟೆಲ್ಗಳಲ್ಲಿ ಒನಕೆ ಓಬವ್ವನ ಹೆಸರನಲ್ಲಿ ಆತ್ಮ ರಕ್ಷಣೆ ಕಲೆಯನ್ನು ವಿದ್ಯಾರ್ಥಿನಿಯರಿಗೆ ಸರ್ಕಾರ ನೀಡುತ್ತಿದೆ. ಕೆಚ್ಚದೆಯ ಒನಕೆ ಓಬವ್ವ ಕ್ರಾಂತಿ ನಾಡಿನಲ್ಲೆಲ್ಲಾ ಹಬ್ಬಲಿ ಎಂದರು.
ಛಲವಾದಿ ಮಹಾಸಂಸ್ಥಾನ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮೀಜಿ, ಮೈಸೂರು ಉರಿಲಿಂಗ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಸಿದ್ದಯ್ಯನಕೋಟೆ ವಿಜಯಮಹಾಂತೇಶ್ವರ ಶಾಖಾಮಠದ ಶ್ರೀ ಬಸವಲಿಂಗ ಮಹಾಸ್ವಾಮಿಗಳು, ಚನ್ನೇನಹಳ್ಳಿ ಛಲವಾದಿ ಗುರುಪೀಠದ ಶ್ರೀ ಬಸವಲಿಂಗಮೂರ್ತಿ ಶರಣರು ದಿವ್ಯಸಾನಿಧ್ಯ ವಹಿಸಿದ್ದರು.
ಕುವೆಂಪು ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ನಲ್ಲಿಕಟ್ಟೆ ಎಸ್ ಸಿದ್ದೇಶ್ ಅವರು ಬರೆದ ಸಾಂಸ್ಕøತಿಕ ನಾಯಕಿ ಒನಕೆ ಓಬವ್ವ ಪುಸ್ತಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಒನಕೆ ಓಬವ್ವ ವಂಶಸ್ಥರಿಗೆ ಮತ್ತು ವಿಶೇಷ ಸಾಧನೆ ಮಾಡಿದ ಸಮುದಾಯದ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಚಿತ್ರದುರ್ಗ ಶಾಸಕ ಜಿ.ಹೆಚ್. ತಿಪ್ಪಾರೆಡ್ಡಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ. ಸ್ವಾಗತಿಸಿದರು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಹಾಗೂ ಹೊಳಲ್ಕೆರೆ ಶಾಸಕ ಎಂ. ಚಂದ್ರಪ್ಪ, ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಗೂಳಿಹಟ್ಟಿ ಡಿ. ಶೇಖರ್, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ, ದೇವರಾಜ ಅರಸು ಟ್ರಕ್ ಟರ್ಮಿನಲ್ ನಿಗಮದ ಅಧ್ಯಕ್ಷ ಡಿ.ಎಸ್. ವೀರಯ್ಯ, ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್, ಛಲವಾದಿ ನಾರಾಯಣಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ. ಸುರೇಶ್, ನಗರಸಭೆ ಅಧ್ಯಕ್ಷೆ ಬಿ. ತಿಪ್ಪಮ್ಮ ವೆಂಕಟೇಶ್, ಮಾಜಿ ಸಚಿವೆ ಮೋಟಮ್ಮ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಜಂಟಿ ನಿರ್ದೇಶಕ ಅಶೋಕ ಎನ್. ಛಲವಾದಿ, ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಕೆ. ಪರಶುರಾಮ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಸ್. ದಿವಾಕರ್, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ ಸೇರಿದಂತೆ ಛಲವಾದಿ ಸಮುದಾಯ ಹಲವು ಗಣ್ಯರು ಉಪಸ್ಥಿತರಿದ್ದರು.