ನವದೆಹಲಿ: ಶ್ರದ್ಧಾ ವಾಕರ್ ಕೊಲೆ ಪ್ರಕರಣದಂತೆಯೇ ಮತ್ತೊಂದು ಕೊಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಚಿಕ್ಕಮ್ಮನನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡುಗಳನ್ನಾಗಿ ಕತ್ತರಿಸಿ ಜೈಪುರದ ದೆಹಲಿ ಹೆದ್ದಾರಿಯ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಈ ನಡುವೆ ಆರೋಪಿ ತನ್ನ ಚಿಕ್ಕಮ್ಮ ಕಾಣೆಯಾಗಿದ್ದಾಳೆ ಅಂತ ದೂರು ನೀಡಿದ್ದನು, ಆದರೆ ಪೊಲೀಸರು ಅವನ ಬಗ್ಗೆ ಅನುಮಾನಗೊಂಡ ನಂತರ ಅವನನ್ನು ತನಿಖೆ ಮಾಡಲು ಪ್ರಾರಂಭಿಸಿದಾಗ, ಅವನು ಆರೋಪಿ ಡಿಸೆಂಬರ್ 11 ರಂದು ಸುತ್ತಿಗೆಯಿಂದ ತನ್ನ ಚಿಕ್ಕಮ್ಮನನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಅಂಥ ಪೋಲಿಸರು ತಿಳಿಸಿದ್ದಾರೆ. ಅಚ್ಯುತ ಗೋವಿಂದ್ ದಾಸ್ ಎಂದು ಕರೆಯಲ್ಪಡುವ 33 ವರ್ಷದ ಅನುಜ್ ಶರ್ಮಾ ಬಂಧಿತ ಆರೋಪಿ. ಕಳೆದ ಏಳೆಂಟು ವರ್ಷಗಳಿಂದ ‘ಹರೇ ಕೃಷ್ಣ’ ಆಂದೋಲನದಲ್ಲಿ ಭಾಗಿಯಾಗಿದ್ದ ಶಂಕಿತನನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.