ಕೆಎನ್ಎನ್ ಡಿಜಿಟಲ್ ಡೆಸ್ಕ್ : ಹರಿಯಾಣದ ಅಂಬಾಲಾ-ಯಮುನಾನಗರ-ಸಹಾರನ್ಪುರ ಹೆದ್ದಾರಿಯಲ್ಲಿ ಬೆಳಗ್ಗೆ ದಟ್ಟ ಮಂಜಿನಿಂದಾಗಿ ಹತ್ತಾರು ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹೆದ್ದಾರಿಯಲ್ಲಿ 10 ರಿಂದ 15 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿದ್ದು, ಸ್ಥಳಕ್ಕೆ ಪೊಲೀಸ್ ತಂಡಗಳು ದೌಡಾಯಿಸಿದ್ದು, ಸಂಚಾರವನ್ನು ಪರ್ಯಾಯ ಮಾರ್ಗದಲ್ಲಿ ಬದಲಾಯಿಸಲಾಗಿದೆ ಎಂದು ತಿಳಿದು ಬಂದಿದೆ.
Haryana | At least 7 vehicles collided with each other near Aurangabad village in Yamunanagar earlier today due to fog. Injured admitted to a hospital.
Police say, "10-15 vehicles may have collided but we can 7-8 here. I appeal to people to drive slowly as it's foggy these days" pic.twitter.com/kkR36jK19C
— ANI (@ANI) December 18, 2022
ಪೊಲೀಸ್ ತಂಡಗಳು ವಾಹನಗಳಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದ್ದು, ಹಾನಿಗೊಳಗಾದ ವಾಹನಗಳನ್ನು ಕ್ರೇನ್ಗಳ ಸಹಾಯದಿಂದ ಮೇಲಕ್ಕೆತ್ತಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂಚಾರ ಪೊಲೀಸ್ ಅಧಿಕಾರಿ ಲೋಕೇಶ್ ರಾಣಾ ತಿಳಿಸಿದ್ದಾರೆ
ವಾಹನಗಳು ಒಂದಕ್ಕೊಂದು ಡಿಕ್ಕಿ ಹೊಡೆದು ರಸ್ತೆ ತಡೆ ನಡೆಸಿದ್ದರಿಂದ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನ ದಟ್ಟಣೆ ಉಂಟಾಗಿ ವಾಹನ ಸವಾರರು ಪರದಾಡಿದರು. ಬಳಿಕ ಪೊಲೀಸರು ಮತ್ತು ಸಂಚಾರ ಸಿಬ್ಬಂದಿ ಟ್ರಾಫಿಕ್ ಕ್ಲಿಯರ್ ಮಾಡಿ ವಾಹನ ಸಂಚಾರ ಸುಗಮಗೊಳಿಸಿದರು.
ಮಂಜಿನ ನಡುವೆ ವಾಹನ ಚಲಾಯಿಸುವಾಗ ಚಾಲಕರು ತಮ್ಮ ವಾಹನದ ಡಿಪ್ಪರ್ ಮತ್ತು ಫಾಗ್ ಲೈಟ್ಗಳನ್ನು ಆನ್ ಮಾಡುವಂತೆ ಲೋಕೇಶ್ ರಾಣಾ ಮನವಿ ಮಾಡಿದ್ದಾರೆ.
‘ಯೂಟ್ಯೂಬ್’ನಿಂದ ‘ಪೋರ್ನ್ ಹಬ್’ ಅಧಿಕೃತ ಚಾನೆಲ್ ನಿಷೇಧ | Pornhub’s Official Channel