ಬೆಗುಸರಾಯ್: ಬಿಹಾರದ ಬೇಗುಸರಾಯ್ ನ ಗಂಡಕ್ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ 206 ಮೀಟರ್ ಉದ್ದದ ಸೇತುವೆ ಭಾನುವಾರ ಬೆಳಿಗ್ಗೆ ಅದರ ಉದ್ಘಾಟನೆಗೂ ಮುನ್ನವೇ ಕುಸಿದುಬಿದ್ದಿದೆ. ಈ ಸೇತುವೆಯನ್ನು 13 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಸೇತುವೆಯನ್ನು ಮುಖ್ಯಮಂತ್ರಿ ನಬಾರ್ಡ್ ಯೋಜನೆಯಡಿ ನಿರ್ಮಿಸಲಾಗಿದೆ ಆದರೆ ಪ್ರವೇಶ ರಸ್ತೆಯ ಕೊರತೆಯಿಂದಾಗಿ ಅದನ್ನು ಉದ್ಘಾಟಿಸಲು ಸಾಧ್ಯವಾಗಲಿಲ್ಲ. ಸೇತುವೆಯ ಮುಂಭಾಗದ ಭಾಗವು ಕುಸಿದ ನಂತರ ನದಿಗೆ ಬಿದ್ದಿದೆ ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಸೇತುವೆಯ ಮುಂಭಾಗದಲ್ಲಿ ಬಿರುಕು ಕಂಡುಬಂದಿದೆ ಎನ್ನಲಾಗಿದೆ. ನಂತರ ಡಿಸೆಂಬರ್ 15 ರಂದು, ಸೇತುವೆಯಲ್ಲಿನ ಬಿರುಕುಗಳ ಬಗ್ಗೆ ಅಧಿಕಾರಿಗಳಿಗೆ ಪತ್ರ ಬರೆಯಲಾಯಿತು ಅದರು ಕೂಡ ಯಾವುದೇ ಕ್ರಮವನ್ನು ಕೈಕೊಂಡಿಲ್ಲ ಎನ್ನುವ ಆರೋಪ ಕೇಳಿ ಬಂದಿದೆ. ಇದರ ನಡುವೆಯೇ ಇಂದು (ಭಾನುವಾರ) ಬೆಳಿಗ್ಗೆ ಸೇತುವೆಯ ಮುಂಭಾಗದ ಭಾಗವು ಕುಸಿದಿದೆ.
ಸಾಹೇಬ್ಪುರ್ ಕಮಲ್ ಪೊಲೀಸ್ ಠಾಣೆ ಪ್ರದೇಶದ ಅಹೋಕ್ ಗಂಡಕ್ ಘಾಟ್ ಕಡೆಯಿಂದ ಆಕೃತಿ ತೋಲಾ ಚೌಕಿ ಮತ್ತು ಬಿಷನ್ಪುರ್ ನಡುವೆ 206 ಮೀಟರ್ ಉದ್ದದ ಸೇತುವೆಯನ್ನು ನಿರ್ಮಿಸಲಾಗಿದೆ. ಸೇತುವೆ ನಿರ್ಮಾಣ ಕಾರ್ಯವು 2016 ರಲ್ಲಿ ಪ್ರಾರಂಭವಾಯಿತು ಮತ್ತು 2017. ರಲ್ಲಿ ಪೂರ್ಣಗೊಂಡಿತು.