ಕೌಲಾಲಂಪುರ: ಮಲೇಷ್ಯಾ ರಾಜಧಾನಿ ಕೌಲಾಲಂಪುರದ ಹೊರವಲಯದಲ್ಲಿರುವ ಪ್ರವಾಸಿ ಶಿಬಿರ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 24 ಕ್ಕೆ ಏರಿದೆ.
ರಕ್ಷಣಾ ಸಿಬ್ಬಂದಿ ಶನಿವಾರ ಒಬ್ಬ ಮಹಿಳೆ ಮತ್ತು ಇಬ್ಬರು ಮಕ್ಕಳ ಶವಗಳನ್ನು ಪತ್ತೆ ಹಚ್ಚಿದ್ದಾರೆ. ಘಟನೆಯಲ್ಲಿ ಒಂಬತ್ತು ಜನರು ಇನ್ನೂ ಕಾಣೆಯಾಗಿದ್ದಾರೆ. ತಾಯಿ ಮತ್ತು ಮಗನ ಶವಗಳು ಮಣ್ಣು ಮತ್ತು ಅವಶೇಷಗಳ ಅಡಿಯಲ್ಲಿ ಒಂದು ಮೀಟರ್ ಕೆಳಗೆ ಹೂತುಹೋಗಿವೆ ಎಂದು ಸೆಲಾಂಗೋರ್ ರಾಜ್ಯ ಅಗ್ನಿಶಾಮಕ ಮುಖ್ಯಸ್ಥ ನೊರಾಜಮ್ ಖಾಮಿಸ್ ತಿಳಿಸಿದ್ದಾರೆ.