ಕೆಎನ್ಎನ್ ಡಿಜಿಟಲ್ ಡೆಸ್ಕ್ : ಐಎನ್ಎಸ್ ಮೊರ್ಮುಗೋವು ಭಾರತದಲ್ಲಿ ತಯಾರಾದ ಅತ್ಯಂತ ಶಕ್ತಿಶಾಲಿ ಯುದ್ಧನೌಕೆಗಳಲ್ಲಿ ಒಂದಾಗಿದೆ. ಇದು ಐಎನ್ಎಸ್ ಮೊರ್ಮುಗಾವೊ ವಿಶ್ವದ ಅತ್ಯಂತ ತಾಂತ್ರಿಕವಾಗಿ ಸುಧಾರಿತ ಕ್ಷಿಪಣಿ ವಾಹಕವಾಗಿದ್ದು, ಭಾರತೀಯ ಸಾಗರ ಸಾಮರ್ಥ್ಯಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಮಾಡುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ.
ಇಂದು ಮುಂಬೈನಲ್ಲಿ ಭಾರತೀಯ ನೌಕಾಪಡೆಗೆ ಐಎನ್ಎಸ್ ಮೊರ್ಮುಗೋವನ್ನು ಭಾರತೀಯ ನೌಕಪಡೆಗೆ ಸೇರ್ಪಡೆಯಾಯಿತು. ಈ ವೇಳೆ ಮಾತನಾಡಿದ ಅವರು ಐಎನ್ಎಸ್ ಮೊರ್ಮುಗೋವ್ ಕಾರ್ಯಾರಂಭಕ್ಕಾಗಿ ನಾವೆಲ್ಲರೂ ಇಂದು ಒಟ್ಟುಗೂಡಿರುವ ಸ್ಥಳವು ಛತ್ರಪತಿ ಶಿವಾಜಿ, ಸಂಭಾಜಿ ಮತ್ತು ಕನ್ಹೋಜಿಯಂತಹ ವೀರರ ಶೌರ್ಯಕ್ಕೆ ಸಾಕ್ಷಿಯಾದ ಐತಿಹಾಸಿಕ ಪ್ರದೇಶವಾಗಿದೆ. ಈ ಸ್ಥಳದಲ್ಲಿ ಈ ಯುದ್ಧನೌಕೆಯ ಕಾರ್ಯಾರಂಭವು ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದೆ ಎಂದೇಳಿದರು.
The systems in INS Mormugao will be able to satisfy not just present but also future needs. It is also an example of our indigenous defence production capability. In future, we will do shipbuilding for the world: Defence Minister Rajnath Singh pic.twitter.com/MnzunLhDSI
— ANI (@ANI) December 18, 2022
ಯುದ್ಧನೌಕೆ ನಿರ್ಮಾಣದಲ್ಲಿ ಭಾರತದ ಸಾಮರ್ಥ್ಯದ ಬಗ್ಗೆ ಮಾತನಾಡಿದ ಸಿಂಗ್, ಇದು ನಮ್ಮ ದೇಶೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯಕ್ಕೆ ಉದಾಹರಣೆಯಾಗಿದೆ. ಭವಿಷ್ಯದಲ್ಲಿ ಭಾರತವು ವಿಶ್ವಕ್ಕೆ ಹಡಗು ನಿರ್ಮಾಣವನ್ನು ಮಾಡುತ್ತದೆ ಎಂದು ಹೇಳಿದರು.
INS ಮೊರ್ಮುಗೋದಲ್ಲಿನ ವ್ಯವಸ್ಥೆಗಳು ಪ್ರಸ್ತುತ ಮಾತ್ರವಲ್ಲದೆ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
इस अवसर पर, मैं पूर्व रक्षा मंत्री स्वर्गीय श्री मनोहर पर्रिकर जी को भी अपनी श्रद्धांजलि अर्पित करता हूँ, जो गोवा की धरती के ही पुत्र थे, और सितंबर 2016 में उन्हीं के करकमलों से INS मोरमुगाओ की लॉन्चिंग हुई थी: रक्षा मंत्री
— रक्षा मंत्री कार्यालय/ RMO India (@DefenceMinIndia) December 18, 2022
ಗೋವಾದ ಮಾಜಿ ಸಿಎಂ ಹಾಗೂ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರನ್ನೂ ಸಚಿವರು ಸ್ಮರಿಸಿದರು. “ಈ ಸಂದರ್ಭದಲ್ಲಿ ನಾನು ಮಾಜಿ ರಕ್ಷಣಾ ಸಚಿವ ದಿವಂಗತ ಶ್ರೀ ಮನೋಹರ್ ಪರಿಕ್ಕರ್ ಅವರಿಗೆ ನನ್ನ ಶ್ರದ್ಧಾಂಜಲಿಗಳನ್ನು ಸಲ್ಲಿಸುತ್ತೇನೆ. ಅವರು ಗೋವಾದ ಮಣ್ಣಿನ ಮಗ ಮತ್ತು ಅವರ ಕೈಯಿಂದ ಸೆಪ್ಟೆಂಬರ್ 2016 ರಲ್ಲಿ INS ಮೊರ್ಮುಗೋವನ್ನು ಉಡಾವಣೆ ಮಾಡಲಾಯಿತು ಎಂದೇಳಿದರು.
ಕಾರ್ಯಕ್ರಮದಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಅನಿಲ್ ಚೌಹಾಣ್, ನೌಕಾಪಡೆ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್, ಗೋವಾ ಗವರ್ನರ್ ಪಿಎಸ್ ಶ್ರೀಧರನ್ ಪಿಳ್ಳೈ, ಗೋವಾ ಸಿಎಂ ಪ್ರಮೋದ್ ಸಾವಂತ್ ಮತ್ತು ಇತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪಕ್ಕದ್ಮನೆ ಕೋಳಿ ಕೂಗೋದ್ರಿಂದ ರಾತ್ರಿಯೆಲ್ಲ ನಿದ್ದೆ ಬರ್ತಾ ಇಲ್ಲ: ಪೋಲಿಸರಿಗೆ ದೂರು
Bank Holidays 2023: ಇಲ್ಲಿದೆ 2023 ರ ʻಬ್ಯಾಂಕ್ ರಜಾದಿನʼಗಳ ಸಂಪೂರ್ಣ ಪಟ್ಟಿ !