ವಿಯೆಟ್ನಾಂ: ತನ್ನ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಪತಿಯ ಕೃತ್ಯದಿಂದ ಬೇಸತ್ತ ಪತ್ನಿ ಆತನ ಮರ್ಮಾಂಗವನ್ನೇ ಕತ್ತರಿಸಿದ ಘಟನೆ ವಿಯೆಟ್ನಾಂನಲ್ಲಿ ನಡೆದಿದೆ.
ಹಾ ಥಿ ನ್ಗುಯೆನ್ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ 29 ವರ್ಷದ ಪತಿ ನ್ಗುಯೆನ್ ವ್ಯಾನ್ ಹೆಚ್ ಅವನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.
ವ್ಯಾನ್ ಹೆಚ್ ತನ್ನ ಮೊದಲ ಪತ್ನಿಯ 15 ವರ್ಷದ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಈ ಬಗ್ಗೆ ಬಾಲಕಿ ಹಲವು ಬಾರಿ ಹಾ ಥಿಗೆ ದೂರು ನೀಡಿದ್ದಳು. ಆದ್ರೆ, ಇದನ್ನು ಪತಿ ನಿರಾಕರಿಸಿದ್ದ.
ಆದ್ರೆ, ಒಂದು ದಿನ ವ್ಯಾನ್ ಹೆಚ್ ಸಿಕ್ಕಿ ಬಿದ್ದಿದ್ದಾನೆ. ಈ ವೇಳೆ ಕೋಪಗೊಂಡ ಮಹಿಳೆ ಚಾಕುವಿನಿಂದ ಮರ್ಮಾಂಗವನ್ನೇ ಕತ್ತರಿಸಿ ಎಸೆದಿದ್ದಾಳೆ. ನಂತ್ರ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಈ ಘಟನೆಯು ಮಾರ್ಚ್ 2022 ರಲ್ಲಿ ವಾಯುವ್ಯ ವಿಯೆಟ್ನಾಂನ ಸೋನ್ ಲಾ ಪ್ರಾಂತ್ಯದಲ್ಲಿ ಸಂಭವಿಸಿದೆ.
BIGG NEWS: ಅಮೆರಿಕದ ಅಟ್ಲಾಂಟಾ ಅಪಾರ್ಟ್ಮೆಂಟ್ ಬಳಿ ಗುಂಡಿನ ದಾಳಿ : ಇಬ್ಬರು ಸಾವು, ಹಲವರಿಗೆ ಗಾಯ| Shootout At US
BIGG NEWS: ಅಮೆರಿಕದ ಅಟ್ಲಾಂಟಾ ಅಪಾರ್ಟ್ಮೆಂಟ್ ಬಳಿ ಗುಂಡಿನ ದಾಳಿ : ಇಬ್ಬರು ಸಾವು, ಹಲವರಿಗೆ ಗಾಯ| Shootout At US