ಹೊಸಪೇಟೆ : ಕಾಲುವೆಯಲ್ಲಿ ಈಜಾಡಲು ಹೋದ ವೇಳೆ ಘೋರ ದುರಂತವೊಂದು ಸಂಭವಿಸಿದ್ದು, ಮೂವರು ವಿದ್ಯಾರ್ಥಿಗಳು ನೀರುಪಾಲಾಗಿರುವ ಘಟನೆ ಹೊಸಪೇಟೆಯ ಎಚ್ ಎಲ್ ಸಿ ಕಾಲುವೆಯಲ್ಲಿ ನಡೆದಿದೆ.
ವಿಜಯನಗರ ಕಾಲೇಜಿನ ಪಿಯುಸಿ ವಿದ್ಯಾರ್ಥಿಗಳಾದ ಗುರುರಾಜ್ (18), ಯಶವಂತ್ (18) ಹಾಗೂ ಪದವಿ ವಿದ್ಯಾರ್ಥಿ ಅಂಜನಿ (20) ಮೃತ ವಿದ್ಯಾರ್ಥಿಗಳಾಗಿದ್ದಾರೆ. ಕಾಲೇಜಿಗೆ ಗೈರು ಹಾಜರಾದ 6 ವಿದ್ಯಾರ್ಥಿಗಳ ತಂಡವು ಎಚ್ ಎಲ್ ಸಿ ಕಾಲುವೆಗೆ ಈಜಾಡಲು ಹೋಗಿತ್ತು. ಈ ವೇಳೆ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಉಳಿದ ಮೂವರು ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ.
Good News : ವಿದ್ಯಾರ್ಥಿನಿಯರಿಗೆ ಸಿಎಂ ಬೊಮ್ಮಾಯಿ ಗುಡ್ ನ್ಯೂಸ್ : ಶಾಲೆಗೆ ಹೋಗಲು ಪ್ರತ್ಯೇಕ ಬಸ್ ಸೌಲಭ್ಯ