ಬೆಂಗಳೂರು : ಅನರ್ಹ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಕೃಷಿ ಇಲಾಖೆ ಬಿಗ್ ಶಾಕ್ ನೀಡಿದ್ದು, ಆದಾಯ ತೆರಿಗೆ ಪಾವತಿಸುವ 95,830 ಮಂದಿ ಅನರ್ಹ ಫಲಾನುಭವಿಗಳಿಂದ ಹಣ ವಸೂಲಿಗೆ ಕೃಷಿ ಇಲಾಖೆ ಸಜ್ಜಾಗಿದೆ.
ಹೌದು, ಆದಾಯ ತೆರಿಗೆ ಪಾವತಿಸುವ ರಾಜ್ಯದ 95,830 ಮಂದಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿ ನಿಯಮ ಬಾಹಿರವಾಗಿ ಆರ್ಥಿಕ ನೆರವು ಪಡೆದಿರುವುದನ್ನು ಪರಶೀಲನೆ ನಡೆಸಿರುವ ಕೃಷಿ ಇಲಾಖೆ ಇದೀಗ ಅವರಿಂದ ಹಣ ವಸೂಲಿಗೆ ಮುಂದಾಗಿದೆ.
ಆದಾಯ ತೆರಿಗೆ ಪಾವತಿಸುವ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯಡಿ ಹಣ ಪಡೆಯಲು ಅನರ್ಹರಾಗಿದ್ದು, ಇದನ್ನು ಮುಚ್ಚಿಟ್ಟು ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಿಯಮ ಬಾಹಿರವಾಗಿ ಕೋಟ್ಯಾಂತರ ರೂ. ನೆರವು ಪಡೆಯಲಾಗಿದೆ. ಇದನ್ನು ವಸೂಲಿ ಮಾಡಲು ಕೃಷಿ ಇಲಾಖೆ ಮುಂದಾಗಿದೆ.
ರಾಜ್ಯದ ಒಟ್ಟು 95,830 ಅನರ್ಹ ಫಲಾನುಭವಿಗಳ ಪೈಕಿ ಬೆಳಗಾವಿ ಜಿಲ್ಲೆಯಲ್ಲೇ ಅತೀ ಹೆಚ್ಚು ಅನರ್ಹ ಫಲಾನಭವಿಗಳು ಪತ್ತೆಯಾಗಿದ್ದಾರೆ. ಬೆಳಗಾವಿಯಲ್ಲಿ 7748, ಕಲಬುರಗಿಯಲ್ಲಿ 5109, ವಿಜಯಪುರದಲ್ಲಿ 5033, ಬೀದರ್ ನಲ್ಲಿ 4951, ತುಮಕೂರು 4648, ಮಂಡ್ಯ 4537, ಹಾಸನ 4260, ಉಡುಪಿ 3882, ಬಾಗಲಕೋಟೆ 3694, ರಾಮನಗರ ಜಿಲ್ಲೆಯಲ್ಲಿ 3452 ಮಂದಿ ಅನರ್ಹ ಫಲಾನುಭವಿಗಳು ಪತ್ತೆಯಾಗಿದ್ದಾರೆ.