ಕೆಎನ್ಎನ್ಡಿಜಿಟಲ್ ಡೆಸ್ಕ್ : ಬಹಳಷ್ಟು ಜನ ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ಸಾಮಾಜಿಕ ಜಾಲತಾಣಗಳಲ್ಲೇ ದಿನ ಕಳೆಯುತ್ತಾರೆ. ಒಂದು ಕ್ಷಣ ಬಿಡುವಿನ ವೇಳೆ ಸಿಕ್ಕರೂ ತಕ್ಷಣ ಸಾಮಾಜಿಕ ಜಾಲತಾಣಗಳಿಗೆ ನುಗ್ಗುತ್ತಾರೆ. ಆದ್ರೆ, ಸೋಶಿಯಲ್ ಮೀಡಿಯಾ ಕೇವಲ ಸಮಯವನ್ನ ಕಳೆಯುವ ಮಾರ್ಗವಲ್ಲ, ಇದು ಮೆದುಳಿಗೆ ಆಹಾರವನ್ನೂ ನೀಡುತ್ತದೆ. ಅದರಲ್ಲೂ ಮಾನವನ ಐಕ್ಯೂ ಮತ್ತು ವೀಕ್ಷಣಾ ಶಕ್ತಿಯನ್ನ ಪರೀಕ್ಷಿಸುವ ಆಪ್ಟಿಕಲ್ ಭ್ರಮೆ ಇದೀಗ ಸಾಕಷ್ಟು ಸದ್ದು ಮಾಡುತ್ತಿದೆ. ಪ್ರತಿದಿನ ಹೊಸ ಆಪ್ಟಿಕಲ್ ಇಲ್ಯೂಷನ್ ಫೋಟೋಗಳು ವೈರಲ್ ಆಗುತ್ತಿವೆ. ಅದ್ರಂತೆ, ಇತ್ತೀಚಿಗೆ ಈ ರೀತಿಯ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮೇಲಿನ ಫೋಟೋವನ್ನ ನೋಡಿದ್ರೆ, ಒಬ್ಬ ವ್ಯಕ್ತಿ ಬೇಟೆಗೆ ಹೋಗಿರುವಂತೆ ತೋರುತ್ತಿದೆ. ಕೈಯಲ್ಲಿ ಬಂದೂಕು ಹಿಡಿದು, ತಲೆಯ ಮೇಲೆ ಟೋಪಿ ಹಾಕಿದ ಬೇಟೆಗಾರ ನಾಯಿಯೊಂದಿಗಿದ್ದಾನೆ. ಅದ್ರಂತೆ, ಆತ ಆ ಕಾಡಿನಲ್ಲಿ ಮೊಲ ಬೇಟೆಯಾಡಲು ಪ್ರಯತ್ನಿಸುತ್ತಿದ್ದಾನೆ. ಆದ್ರೆ, ಮೊಲ ಮಾತ್ರ ಆತನ ಕಣ್ಣಿಗೆ ಬೀಳಲಿಲ್ಲ. ಅದ್ರಂತೆ, ಮೊಲವನ್ನ ಕಂಡುಹಿಡಿಯುವುದು ಈ ಆಪ್ಟಿಕಲ್ ಭ್ರಮೆಯ ಉದ್ದೇಶವಾಗಿದೆ.
ನೀವು ಆ ಮೊಲವನ್ನು ನೋಡಿದ್ದೀರಾ? ಅದ್ರಂತೆ, ನೀವು 10 ಸೆಕೆಂಡುಗಳಲ್ಲಿ ಮೊಲವನ್ನ ಗುರುತಿಸಬಲ್ಲಿರಾ.? ಆದ್ರೆ, ಮೊಲವನ್ನ ಹುಡುಕುವುದು ಸುಲಭದ ಕೆಲಸವಲ್ಲ. ಆಪ್ಟಿಕಲ್ ಭ್ರಮೆಯ ಸೃಷ್ಟಿಕರ್ತ ಅದನ್ನ ಅದೃಶ್ಯವಾಗುವಂತೆ ವಿನ್ಯಾಸಗೊಳಿಸಿದ್ದಾನೆ. ಫೋಟೋದಲ್ಲಿ ಹಿಂದೆ ಮರವಿದೆ ಅಲ್ವಾ.? ಅದರ ಪಕ್ಕದಲ್ಲಿ ಮೊಲವೊಂದು ನಿಂತಿದೆ. ನಿಮ್ಗೆ ಇನ್ನೂ ಉತ್ತರ ಗೊತ್ತಾದಿದ್ರೆ, ಕೆಳಗಿನ ಚಿತ್ರವನ್ನು ನೋಡಿ. ಕೆಂಪು ವೃತ್ತದಲ್ಲಿ ಮೊಲ ಕಾಣಿಸಿಕೊಳ್ಳುತ್ತೆ.
ಅಬ್ಬಬ್ಬಾ ಈ ಗಿಡದಿಂದ ಇಷ್ಟೆಲ್ಲಾ ಪ್ರಯೋಜನಗಳಿವ್ಯಾ.? ತಿಳಿದ್ಮೇಲೆ, ನೀವು ತಕ್ಷಣ ಸಸಿ ತಂದು ಬೆಳೆಸೋದು ಗ್ಯಾರೆಂಟಿ.!