ನವದೆಹಲಿ : ಫೈನಲ್ನಲ್ಲಿ ಬಾಂಗ್ಲಾದೇಶವನ್ನ ಮಣಿಸಿ ಅಂಧರ ಟಿ20 ವಿಶ್ವಕಪ್ ಗೆಲ್ಲುವ ಮೂಲಕ ಭಾರತ ಕ್ರಿಕೆಟ್ ತಂಡ ಇತಿಹಾಸ ಸೃಷ್ಟಿಸಿದೆ. ಈ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಕ್ರಿಕೆಟ್ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿ, “ಭಾರತವು ತನ್ನ ಕ್ರೀಡಾಪಟುಗಳ ಬಗ್ಗೆ ಹೆಮ್ಮೆ ಪಡುತ್ತದೆ. ಅಂಧರ ಟಿ20 ವಿಶ್ವಕಪ್ ಗೆದ್ದಿರುವುದು ಸಂತಸ ತಂದಿದೆ. ನಮ್ಮ ತಂಡಕ್ಕೆ ಅಭಿನಂದನೆಗಳು ಮತ್ತು ಅವರ ಮುಂದಿನ ಪ್ರಯತ್ನಗಳಿಗೆ ಶುಭಾಶಯಗಳು” ಎಂದಿದ್ದಾರೆ.
ಅಂದ್ಹಾಗೆ, ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇಂದು (ಶನಿವಾರ, ಡಿಸೆಂಬರ್ 17) ಅಂಧರ ವಿಶ್ವಕಪ್ನ ಫೈನಲ್ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ 120 ರನ್ಗಳಿಂದ ಬಾಂಗ್ಲಾದೇಶವನ್ನ ಸೋಲಿಸಿತು. ಈ ಮೂಲಕ ಭಾರತ ಮೂರನೇ ಬಾರಿಗೆ ಈ ಪ್ರಶಸ್ತಿಯನ್ನ ಬಾಚಿಕೊಂಡಿದೆ. ಇದಕ್ಕೂ ಮುನ್ನ 2012 ಮತ್ತು 2017ರಲ್ಲಿ ಭಾರತ ಅಂಧರ ಟಿ20 ವಿಶ್ವಕಪ್ ವಶಪಡಿಸಿಕೊಂಡಿತ್ತು.
ಕಡಿಮೆ ಸಮಯದಲ್ಲಿ ಹೆಚ್ಚು ‘ಹಣ’ ಗಳಿಸ್ಬೇಕಾ.? ಯಾವುದೇ ಅಪಾಯ ಇರದ ಈ ‘ಅತ್ಯುತ್ತಮ ಆಯ್ಕೆ’ ಬಳಸಿ
ಸಂಗತಿಗಳ ಮಧ್ಯೆ ಹುಳಿ ಹಿಂಡುತ್ತಿದ್ಯಂತೆ ‘ಸ್ಮಾರ್ಟ್ ಫೋನ್’ ; ‘ಹೊಸ ಅಧ್ಯಯನ’ದಿಂದ ಶಾಕಿಂಗ್ ಸಂಗತಿ