ಚಿಕ್ಕಮಗಳೂರು : ಹಂಗರವಳ್ಳಿ ಸರ್ಕಾರಿ ಶಾಲೆಗೆ ಸಚಿವ ಡಾ.ನಾರಾಯಣಗೌಡ ಅವರು ಶಾಲಾ ವಾಹನವನ್ನು ಹಸ್ತಾಂತರಿಸಿದರು.
ವಿಧಾನಪರಿಷತ್ ಸದಸ್ಯ ಎಂ ಕೆ. ಪ್ರಾಣೇಶ್ ಅವರ ಅನುದಾನದಡಿಯಲ್ಲಿ 25 ಲಕ್ಷ ವೆಚ್ಚದಲ್ಲಿ ಹಂಗರವಳ್ಳಿ ಸರ್ಕಾರಿ ಶಾಲೆಗೆ ಶಾಲಾ ವಾಹನ ನೀಡಲಾಗಿದ್ದು, ಇಂದು ಶಾಲಾ ಆಡಳಿತ ಮಂಡಳಿಯವರಿಗೆ ಹಸ್ತಾಂತರಿಸಿದರು. ಶಾಸಕರಾದ ಸಿಟಿ ರವಿ, ಎಂಎಲ್ಸಿ ಎಂಕೆ ಪ್ರಾಣೇಶ್, ಸಚಿವರ ಆಪ್ತ ಕಾರ್ಯದರ್ಶಿ ಹೆಚ್ ಜಿ ಪ್ರಭಾಕರ್ ಸೇರಿದಂತೆ ಎಲ್ಲಾ ಗಣ್ಯರು ಉಪಸ್ಥಿತರಿದ್ದರು.