ಬೆಂಗಳೂರು : ಬ್ಯುಸಿ ಶೆಡ್ಯೂಲ್ನಲ್ಲಿ ಇರುವ ಸಿಟಿ ಜನರು ವಯಸ್ಸಾದವರನ್ನು ನೋಡಿಕೊಳ್ಳೋದಕ್ಕೆ ಅಂತಾನೆ ಜನಗಳನ್ನು ಹುಡೋದಕ್ಕೆ ಮುಂದಾಗುವುದು ಸಹಜ ಇದನ್ನೆ ಬಂಡಾವನ್ನಾಗಿ ಮಾಡಿಕೊಂಡು ಖತರ್ನಾಕ್ ಖದೀಮರು ಎಂಟ್ರಿಯಾಗುತ್ತಿದ್ದಾರೆ ಎಂಬ ಬೆಚ್ಚಿಬೀಳುವ ಸುದ್ದಿಯೊಂದು ಬಹಿರಂಗವಾಗಿದೆ.
ಹಾಗಾಗಿ ಇನ್ಮುಂದೆ ನಿಮ್ಮ ಮನೆ ಕೇರ್ ಟೇಕರ್ ನೆಪದಲ್ಲಿ ಎಂಟ್ರಿ ಕೊಡುವವರನ್ನು ನಂಬಬೇಡಿ. ಇಂತಹದ್ದೇ ಘಟನೆಯೊಂದು ಸಿಲಿಕಾನ್ ಸಿಟಿಯ ಬೆಂಗಳೂರಿನ ಕೊರಮಂಗಲದಲ್ಲಿ ನಡೆದಿದ್ದು, ಅನಿಲ್ ಡಿಸೋಜಾ ಅವರ ತಂದೆ ಅಂಟೊನಿ ಡಿಸೋಜಾ ಅವರನ್ನು ನೋಡದಕ್ಕಾಗಿ ಕೇರ್ ಟೇಕರ್ ನೇಮಿಸಿದ್ದರು.
ಈ ವೇಳೆ ಸುಮುಖ ನರ್ಸಿಂಗ್ ಸೆಂಟರ್ ನ ನಾರಾಯಣಸ್ವಾಮಿ ಕೇರ್ ಟೇಕರ್ ಪರಮೇಶ್ ನನ್ನ ಕಳುಹಿಸಿಕೊಟ್ಟಿದ್ರು. ಆದ್ರೆ ಮನೆಗೆ ಬಂದ ಪರಮೇಶ್ ನಂಬಿಕೆ ಗಳಿಸಿ ವಂಚನೆ ಮಾಡಿದ್ದ. ಅನಿಲ್ ತಂದೆ ಹಾಗೂ ತಾಯಿಯ ಪೋನ್ ಪೇ ಡೀಟೇಲ್ಸ್ ಪಡೆದಿದ್ದ ಪರಮೇಶ್ ನಂತರ ಹಂತ ಹಂತವಾಗಿ ಇಬ್ಬರ ಅಕೌಂಟ್ನಿಂದ 5 ಲಕ್ಷಕ್ಕೂ ಅಧಿಕ ಹಣ ವರ್ಗಾವಣೆ ಮಾಡಿಕೊಂಡಿದ್ದ. ಈ ಸಂಬಂಧ ಕೋರಮಂಗಲ ಪೊಲೀಸ್ ಠಾಣೆಗೆ ಅನಿಲ್ ಡಿಸೋಜ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಸಿಕೊಂಡ ಕೋರಮಂಗಲ ಪೊಲೀಸರು ಆರೋಪಿ ಪರಮೇಶ್ ನನ್ನು ಬಂಧಿಸಿದ್ದಾರೆ. ಈ ಘಟನೆ ಬೆಳಕಿಗೆ ಬಂದಿದೆ ಹಾಗಾಗಿ ಸಿಟಿ ಜನರೇ ಇನ್ನಾದ್ರೂ ಎಚ್ಚರ ವಹಿಸಿ ಎಂದು ಈ ಸುದ್ದಿ ಮೂಲಕ ಮನವರಿಕೆ ಮಾಡಲಾಗುತ್ತಿದೆ.