ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೈತಿಕ ಪೊಲೀಸ್ ಗಿರಿ ಮತ್ತೆ ಮುಂದುವರೆದಿದೆ. ಜಿಲ್ಲೆಯಲ್ಲಿ ಸಿನಿಮಾ ವೀಕ್ಷಿಸಲು ಬಂದಿದ್ದ ಅನ್ಯಕೋಮಿನ ಜೋಡಿಗೆ ತಡೆ ಹಿಡಿದಿದ್ದಾರೆ.
BREAKING NEWS : ಸಿಎಂ ಬೊಮ್ಮಾಯಿಗೂ ತಟ್ಟಿದ ಬೆಂಗಳೂರಿನ ‘ಟ್ರಾಫಿಕ್ ಜಾಮ್’ ಬಿಸಿ!
ಮಂಗಳೂರಿನ ಬಿಜೈ ಬಳಿಯ ಭಾತರ್ ಚಿತ್ರಮಂದಿರದ ಬಳಿ ಘಟನೆ ನಡೆದಿದೆ. ಅನ್ಯಕೋಮಿನ ಜೋಡಿಯನ್ನು ತಡೆದು ಬಜರಂಗದಳ ಕಾರ್ಯಕರ್ತರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಗಲಾಟೆ ನಡೆದಿದೆ. ಹೀಗಾಗಿ ಉರ್ವಾ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಈ ವೇಳೆ ಮಂಗಳೂರಿನ ಉರ್ವಾ ಠಾಣೆ ಪೊಲೀಸರಿಂದ ಆ ಜೋಡಿಯ ರಕ್ಷಣೆ ಮಾಡಿದ್ದಾರೆ. ಕೂಡಲೇ ಆ ಜೋಡಿಯನ್ನು ಉರ್ವಾ ಪೊಲೀಸರು ಠಾಣೆಗೆ ಕರೆತಂದಿದ್ದಾರೆ.