ಮಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗಿನ ಬಗ್ಗೆ ಆನಂದ್ ಸಿಂಗ್ ಹೇಳಿದ್ದರು. ಇದೀಗ ಅವರು ಉಲ್ಟಾ ಹೊಡೆದಿದ್ದಾರೆ. ಉತ್ತರಕರ್ನಾಟ ರಾಜ್ಯ ಆಗುತ್ತೆ , ವಿಜಯನಗರ ರಾಜಧಾನಿ ಆಗುತ್ತೆ ಅಂತ ನಾನು ಹೇಳಿದ್ದು. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಅಂತ ಹೇಳಿರೋದು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
BREAKING NEWS : ಕುಕ್ಕರ್ ಬಾಂಬ್ ಸ್ಪೋಟ ಕೇಸ್ : ಶಂಕಿತ ಉಗ್ರ ಶಾರಿಕ್ ಬೆಂಗಳೂರಿಗೆ ಶಿಫ್ಟ್
ನಗರದಲ್ಲಿ ಮಾತನಾಡಿದ ಅವರು, ಮಾಧ್ಯಮ ಸ್ನೇಹಿತರು ನನ್ನ ಹೇಳಿಕೆಯನ್ನ ಸರಿಪಡಿಸಿಕೊಳ್ಳಬೇಕು. ಉತ್ತರ ಕರ್ನಾಟಕ ರಾಜ್ಯ ಆಗುತ್ತದೆ, ವಿಜಯನಗರ ರಾಜಧಾನಿ ಆಗುತ್ತದೆ ಅಂತ ಹೇಳಿಲ್ಲ. ಉತ್ತರ ಕರ್ನಾಟಕದಲ್ಲಿ ಬಿಜೆಪಿ ಪಕ್ಷಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಎಂದರು.
ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿಗೆ ವಿಜಯನಗರ ರಾಜಧಾನಿಯಾದರೆ, ಜಿಲ್ಲಾ ಕೇಂದ್ರ ಯಾವುದಾಗುತ್ತದೆ ಅಂದರೆ ರಾಯಚೂರು, ಬೀದರ್, ಗುಲ್ಬರ್ಗಾ, ಹೊಸಪೇಟೆ, ಬಳ್ಳಾರಿ. ಉತ್ತರ ಕರ್ನಾಟಕ ಅಂದರೆ ನಮ್ಮದು ಕಲ್ಯಾಣ ಕರ್ನಾಟಕ. ಕಲ್ಯಾಣ ಕರ್ನಾಟಕಕ್ಕೆ ವಿಜಯನಗರ ರಾಜಧಾನಿ ಆಗುತ್ತದೆ ಅನ್ನೋ ಅರ್ಥದಲ್ಲಿ ಹೇಳಿದ್ದು. ಪ್ರತ್ಯೇಕ ರಾಜ್ಯ ಆಗುತ್ತದೆ ಅನ್ನೋದನ್ನ ಮಾಧ್ಯಮದವರು ಸರಿ ಪಡಿಸಬೇಕು ಎಂದರು.