ಬೆಂಗಳೂರು : ಹೊಸವರ್ಷಕ್ಕೆ ಕೌಂಟ್ ಡೌನ್ ಶುರುವಾಗಿದ್ದು, ಬೆಂಗಳೂರಿನ ಬ್ರಿಗೇಡ್ ರೋಡ್ ಹಾಗೂ ಚರ್ಚ್ ಸ್ಟ್ರೀಟ್ ಈಗಾಗಲೇ ಭರದಿಂದ ಸಿದ್ದತೆ ಮಾಡಲಾಗುತ್ತಿದೆ. ಈ ಬೆನ್ನಲ್ಲೇ ಪಾರ್ಟಿಗೆ ತೆರಳೋದಕ್ಕೆ ಅಪ್ರಾಪ್ತ ಯುವಕರು ಇದೀಗ ಹೊಸ ಕಳ್ಳದಾರಿಯೊಂದನ್ನು ಹಿಡಿದ್ದು, ನಕಲಿ ಆಧಾರ್ ಕಾರ್ಡ್ ಮಾಡಿಸಿಕೊಳ್ಳೋದಕ್ಕೆ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
BIGG NEWS: ಚಾಮರಾಜನಗರದಲ್ಲಿ ಮುಂದುವರಿದ ಚಿರತೆ ಹಾವಳಿ; ಜನರಿಗೆ ಆತಂಕ
ಕೊರೊನದಿಂದ ಕಳೆದ ಹಲವು ವರ್ಷಗಳಿಂದ ನ್ಯೂ ಇಯರ್ ಸೆಲೆಬ್ರೇಷನ್ ಮಾಡಿಲ್ಲ ಹಾಗಾಗಿ ಈ ಬಾರಿ ಯಾವುದೇ ಅಡೆತಡೆ ಇಲ್ಲದ ಕಾರಣ 18 ವರ್ಷ ತುಂಬಿದ ಯುವಕ ಯುವತಿಯರೂ ಪಾರ್ಟಿ ಮೂಡಿನಲ್ಲಿದ್ದಾರೆ. ಪಾರ್ಟಿಗಾಗಿ ಸರ್ಕಾರ ಕೆಲವೊಂದು ರೂಲ್ಸ್ ಜಾರಿ ಮಾಡಿದೆ ರೂಲ್ಸ್ ಪ್ರಕಾರ 18 ವರ್ಷದೊಳಗಿನ ಮಕ್ಕಳಿಗೆ ಪಬ್ ಹಾಗೂ ಬಾರ್ನೊಳಗೆ ಪ್ರವೇಶ ಇಲ್ಲ. ಒಂದೊಮ್ಮೆ ಪ್ರವೇಶ ನೀಡಿದರೆ ಪಬ್ ಮಾಲೀಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ಗಂಟೆ ನೀಡಿದ್ದಾರೆ
BIGG NEWS: ಚಾಮರಾಜನಗರದಲ್ಲಿ ಮುಂದುವರಿದ ಚಿರತೆ ಹಾವಳಿ; ಜನರಿಗೆ ಆತಂಕ
18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಎಂದು ಗುರುತಿಸೋದಕ್ಕೆ ಪಬ್ ಮಾಲೀಕರು ಆಧಾರ್ ಕಾರ್ಡ್ ಪರಿಶೀಲಿಸಬೇಕು . ಇದೀಗ ಪಬ್ನೊಳಗೆ ಎಂಟ್ರಿ ನೀಡಬೇಕೆಂದರೆ ಸಿಲಿಕಾನ್ ಸಿಟಿಯಲ್ಲಿ ಫೇಕ್ ಆಧಾರ್ ಕಾರ್ಡ್ ಮಾಡೋದಕ್ಕೆ ಮುಂದಾಗಿದ್ದು, ಇದೀಗ ಬೆಳಕಿಗೆ ಬಂದಿದೆ.
BIGG NEWS: ಚಾಮರಾಜನಗರದಲ್ಲಿ ಮುಂದುವರಿದ ಚಿರತೆ ಹಾವಳಿ; ಜನರಿಗೆ ಆತಂಕ
ಈ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ದಾಖಲಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆ ಎಚ್ಚರಿಕೆ ವಹಿಸಬೇಕಾಗಿದೆ ಮತ್ತು ಪೋಷಕರೇ ನಿಮ್ಮ ಮಕ್ಕಳು ಹೊಸ ವರ್ಷಾಚರಣೆಯ ಪಾರ್ಟಿಗೆ ತೆರಳುವ ಮುನ್ನ ಹುಷಾರಾಗಿರುವುದು ಉತ್ತಮ. ನಿಮ್ಮ ಮಕ್ಕಳೂ ನಕಲಿ ಅಧಾರ್ ಕಾರ್ಡ್ ಸೃಷ್ಟಿಸಿ ಈ ಕಳ್ಳದಾರಿ ಹಿಡಿದ್ದಾರಾ ಅನ್ನೋದನ್ನು ಪರಿಶೀಲನೆ ಮಾಡಿ ಎಚ್ಚರ ವಹಿಸುವುದು ಮುಖ್ಯವಾಗಿದೆ
BIGG NEWS: ಚಾಮರಾಜನಗರದಲ್ಲಿ ಮುಂದುವರಿದ ಚಿರತೆ ಹಾವಳಿ; ಜನರಿಗೆ ಆತಂಕ