ಗುರುಗ್ರಾಮ್: ವಕೀಲರೊಬ್ಬರು ಮೂತ್ರ ವಿಸರ್ಜಿಸಲೆಂದು ತನ್ನ ಕಾರಿನಿಂದ ಕೆಳಗಿಳಿದಿದ್ದಾರೆ. ಇದನ್ನು ಗಮನಿಸಿದ ಮೂವರು ವ್ಯಕ್ತಿಗಳು ವಕೀಲನಿಗೆ ಚಾಕು ತೋರಿಸಿ, ಮರ್ಸಿಡಿಸ್ ಕಾರನ್ನು ದೋಚಿ ಪರಾರಿಯಾಗಿರುವ ಘಟನೆ ಗುರುಗ್ರಾಮದ ಸೆಕ್ಟರ್ 29 ಪ್ರದೇಶದಲ್ಲಿ ನಡೆದಿದೆ.
ಸೆಕ್ಟರ್ 66 ರಲ್ಲಿ ವಾಸಿಸುವ ವಕೀಲ ಅನುಜ್ ಬೇಡಿ ಅವರು ನೀಡಿದ ದೂರಿನ ಪ್ರಕಾರ, ಗುರುವಾರ ರಾತ್ರಿ 8.50 ರ ಸುಮಾರಿಗೆ ಸೆಕ್ಟರ್ 29 ಪ್ರದೇಶದ ಅಗ್ನಿಶಾಮಕ ಠಾಣೆ ಮತ್ತು ಆಡಿ ಶೋ ರೂಂ ಚೌಕ್ ನಡುವೆ ಈ ಘಟನೆ ನಡೆದಿದೆ.
ʻನಾನು ನನ್ನ ಬಿಳಿ ಮರ್ಸಿಡಿಸ್-ಸಿ 220 (2014 ಮಾಡೆಲ್) ಕಾರಿನಲ್ಲಿ ಸೆಕ್ಟರ್ 29 ರಲ್ಲಿನ ಮದ್ಯದ ಅಂಗಡಿಯಿಂದ ಮನೆಗೆ ಹಿಂದಿರುಗುತ್ತಿದ್ದೆ. ನಾನು ಆಡಿ ಶೋರೂಮ್ ಚೌಕ್ನ ಸ್ವಲ್ಪ ಮುಂದೆ ರಸ್ತೆಬದಿಯಲ್ಲಿ ನನ್ನ ಕಾರನ್ನು ನಿಲ್ಲಿಸಿ ಮೂತ್ರ ವಿಸರ್ಜನೆಗೆ ಹೋಗಿದ್ದೆ. ನಾನು ನನ್ನ ಕಾರಿನಿಂದ ಇಳಿದು ಮುಂದೆ ಸಾಗಿದಾಗ ಹಿಂದಿನಿಂದ ಹ್ಯುಂಡೈ ಕಾರು ಬಂದು ನನ್ನ ಕಾರಿನ ಮುಂದೆ ನಿಲ್ಲಿಸಿತು.
ಅದರಲ್ಲಿದ್ದ ಮೂವರು ಬಂದು, ಅವರಲ್ಲಿ ಒಬ್ಬರು ನನ್ನನ್ನು ಚಾಕು ತೋರಿಸಿ ಬೆದರಿಸಿ ನನ್ನ ಕಾರಿನೊಂದಿಗೆ ಓಡಿಹೋದರುʼ ಎಂದು ಅನುಜ್ ಬೇಡಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.
ದೂರಿನ ನಂತರ, ಸೆಕ್ಟರ್ 29 ಪೊಲೀಸ್ ಠಾಣೆಯಲ್ಲಿ ಐಪಿಸಿಯ ಸೆಕ್ಷನ್ 382 ಮತ್ತು 34 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ನಾವು ಸಮೀಪದ ಪ್ರದೇಶದ ಸಿಸಿಟಿವಿ ದೃಶ್ಯಗಳ ಸಹಾಯದಿಂದ ಆರೋಪಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದೇವೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ತನಿಖಾಧಿಕಾರಿ ಎಎಸ್ಐ ಸಂದೀಪ್ ಕುಮಾರ್ ತಿಳಿಸಿದ್ದಾರೆ.
WATCH VIDEO: ಮದುವೆ ಸಂಭ್ರಮದಲ್ಲಿದ್ದ ಮಹಿಳೆಗೆ ಹೃದಯಾಘಾತ, ಡಾನ್ಸ್ ಮಾಡುವಾಗ ಕುಸಿದುಬಿದ್ದು ಸಾವು… ವಿಡಿಯೋ ವೈರಲ್
BIGG NEWS : ಅಕ್ರಮ-ಸಕ್ರಮ : ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ
WATCH VIDEO: ಮದುವೆ ಸಂಭ್ರಮದಲ್ಲಿದ್ದ ಮಹಿಳೆಗೆ ಹೃದಯಾಘಾತ, ಡಾನ್ಸ್ ಮಾಡುವಾಗ ಕುಸಿದುಬಿದ್ದು ಸಾವು… ವಿಡಿಯೋ ವೈರಲ್
BIGG NEWS : ಅಕ್ರಮ-ಸಕ್ರಮ : ಸರ್ಕಾರಿ ಜಮೀನುಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ