ಸಿಯೋನಿ (ಮಧ್ಯಪ್ರದೇಶ): ಮದುವೆ ಮನೆಯಲ್ಲಿ ಏರ್ಪಡಿಸಲಾಗಿದ್ದ ಸಂಗೀತ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ 60 ವರ್ಷದ ಮಹಿಳೆಯೊಬ್ಬರು ಹೃದಯಾಘಾತದಿಂದ ಬುಧವಾರ ಸಾವನ್ನಪ್ಪಿರುವ ಘಟನೆ ಸಿಯೋನಿಯ ಬಖಾರಿ ಗ್ರಾಮದಲ್ಲಿ ನಡೆದಿದೆ. ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮೃತ ಮಹಿಳೆಯನ್ನು ಯಶೋದಾ ಸಾಹು ಎಂದು ಗುರುತಿಸಲಾಗಿದ್ದು, ಭೀಮಗಢದ ನಿವಾಸಿಯಾಗಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲಿ, ನಾಲ್ಕು ಮಂದಿ ಮಹಿಳೆಯರು ಸ್ಟೇಜ್ ಮೇಲೆ ಡಾನ್ಸ್ ಮಾಡುತ್ತಿರುತ್ತಾರೆ. ಈ ವೇಳೆ ಯಶೋದಾ ಇದ್ದಕ್ಕಿದ್ದಂತೆ ಕುಸಿದು ಬೀಳುವುದನ್ನು ನೋಡಬಹುದು. ಯಶೋದಾ ಅವರನ್ನು ಕೂಡಲೇ ಸಿಯೋನಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದ್ರೆ, ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
दु:खद..!
One more death of heart attack while dancing on the stage in Seoni, MP pic.twitter.com/iLIxBizsuR— Govind Gurjar (@Gurjarrrrr) December 15, 2022
ಯಶೋದಾ ವಧುವಿನ ಅಜ್ಜನ ಸಹೋದರಿಯಾಗಿದ್ದು, ಇತರ ಮೂವರು ಸಹೋದರಿಯರೊಂದಿಗೆ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದಾಗ ಈ ಘಟನೆ ನಡೆದಿದೆ.
Bank Holidays 2023: 2023 ರಲ್ಲಿನ ʻಬ್ಯಾಂಕ್ ರಜಾದಿನʼಗಳ ಸಂಪೂರ್ಣ ಪಟ್ಟಿ ಇಲ್ಲಿದೆ!
BIGG NEWS : ನೇಕಾರರ ಮಕ್ಕಳಿಗೆ `ವಿದ್ಯಾನಿಧಿ ಯೋಜನೆ’ಯಡಿ ವಿದ್ಯಾರ್ಥಿವೇತನ : ಸಿಎಂ ಬಸವರಾಜ ಬೊಮ್ಮಾಯಿ
Bank Holidays 2023: 2023 ರಲ್ಲಿನ ʻಬ್ಯಾಂಕ್ ರಜಾದಿನʼಗಳ ಸಂಪೂರ್ಣ ಪಟ್ಟಿ ಇಲ್ಲಿದೆ!