ಬೆಂಗಳೂರು : ನೇಕಾರರ ಮಕ್ಕಳಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿ ಸಿಹಿಸುದ್ದಿ ನೀಡಿದ್ದು, ವಿದ್ಯಾನಿಧಿ ಯೋಜನೆಯಡಿ ನೇಕಾರರ 46,000 ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
WATCH VIDEO: ಹಲವರನ್ನು ಮದುವೆಯಾಗಿದ್ದ ಪೊಲೀಸಪ್ಪನಿಗೆ ಬೆಳ್ಳಂ ಬೆಳ್ಳಗೆ ಬಿತ್ತು ಗೂಸಾ | viral video
ಗೃಹ ಕಚೇರಿ ಕೃಷ್ಣದಲ್ಲಿ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಮಗ್ಗ ನೇಕಾರರಿಗೆ ತಲಾ 5,000 ರೂ. ನೀಡುವ ನೇಕಾರ ಸಮ್ಮಾನ್ ಯೋಜನೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ನೇಕಾರ ಕುಟುಂಬಗಳ 46,000 ಮಕ್ಕಳ ಪಟ್ಟಿಯನ್ನು 15 ದಿನಗಳೊಳಗೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾನಿಧಿ ಅವರ ಹಕ್ಕು ಆಗಿರುವುದರಿಂದ ಮಕ್ಕಳಿಂದ ಯಾವುದೇ ಅರ್ಜಿಯನ್ನು ಸಂಗ್ರಹಿಸಲಾಗುವುದಿಲ್ಲ ಎಂದು ಅವರು ಹೇಳಿದರು.
BIGG NEWS: ಹೊಸ ವರ್ಷಾಚರಣೆಗೆ ಬೆಂಗಳೂರು ಸಿದ್ಧತೆ; ಎಂಜಾಯ್ ಮಾಡಲು ಕಳ್ಳದಾರಿ ಹಿಡಿದ ಅಪ್ರಾಪ್ತರು
ನೇಕಾರ ಸಮ್ಮಾನ್ ಅಡಿ ನೀಡುವ ಆರ್ಥಿಕ ನೆರವು ಪರಿಷ್ಕರಣೆಯ ಜೊತೆಗೆ ನೇಕಾರರ ಮಕ್ಕಳಿಗೆ ವಿದ್ಯಾನಿಧಿ ಸೌಲಭ್ಯ ನೀಡಲು ಮುಂದಾಗಿದೆ. ಜೊತೆಗೆ ನೇಕಾರರಿಗೆ ತಲಾ 50 ಸಾವಿರ ರೂ. ವರೆಗೆ ಧನಸಹಾಯ ನೀಡುವ ಕಾಯಕ ಎಂಬ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಜೊತೆಗೆ ಕೈಮಗ್ಗ ನೇಕಾರರಿಗೆ ನೆರವು ನೀಡಿದಂತೆಯೇ ವಿದ್ಯುತ್ ಮಗ್ಗದವರಿಗೂ ನೆರವು ನೀಡಲು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.