ಮಂಚಾರ್ಯಾಲ (ತೆಲಂಗಾಣ): ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಒಂದೇ ಕುಟುಂಬದ ಐವರು ಸಜೀವ ದಹನವಾಗಿರುವ ಘಟನೆ ಮಂಚಾರ್ಯಾಲ ಜಿಲ್ಲೆಯ ಮಂದಮರ್ರಿ ಮಂಡಲದ ವೆಂಕಟಾಪುರದಲ್ಲಿ ನಡೆದಿದೆ.
ಈ ಭೀಕರ ಅಗ್ನಿಗೆ ಶಿವಯ್ಯ (50), ಅವರ ಪತ್ನಿ ಪದ್ಮಾ (45) ಮತ್ತು ಮೌನಿಕಾ (23), ಪದ್ಮಾ ಅವರ ಅಕ್ಕನ ಮಗಳು ಬಲಿಯಾಗಿದ್ದಾರೆ.
ಮನೆ ಬೆಂಕಿಯಿಂದ ಹೊತ್ತಿ ಉರಿಯುತ್ತಿರುವುದನ್ನು ಕಂಡ ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಅಗ್ನಿ ಅವಘಡಕ್ಕೆ ಕಾರಣವೇನೆಂದು ತನಿಖೆಯ ನಂತರವೇ ತಿಳಿಯಲಿದೆ ಎಂದು ಡಿಸಿಪಿ ಅಖಿಲ್ ಮಹಾಜನ್ ತಿಳಿಸಿದ್ದಾರೆ.