ಬೆಂಗಳೂರು : ಬೆಂಗಳೂರಿನಲ್ಲಿ ಜಿಟಿಜಿಟಿ ಮಳೆಯಿಂದಾಗಿ ಕಳೆದ ಒಂದು ವಾರದಿಂದ ನಿತ್ಯ ಸರಾಸರಿ 50 ಮಂದಿಯಲ್ಲಿ ಡೆಂಗ್ಯೂ ಜ್ವರ ಪತ್ತೆಯಾಗುತ್ತಿದೆ. ಜೊತೆಗೆ ರಾಜ್ಯದಲ್ಲಿಯೂ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿದೆ.
BIGG NEWS : ನರೇಗಾ ಯೋಜನೆಯಡಿ `ಗರ್ಭಿಣಿ, ಬಾಣಂತಿ’ಯರಿಗೆ ಶೇ. 50 ರಷ್ಟು ಕೆಲಸ ರಿಯಾಯಿತಿ : ರಾಜ್ಯ ಸರ್ಕಾರ ಆದೇಶ
ರಾಜ್ಯಾದ್ಯಂತ ಭಾರೀ ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಐದೇ ದಿನದಲ್ಲಿ ರಾಜ್ಯಾದ್ಯಂತ 432 ಮಂದಿಗೆ ಸೋಂಕು ದೃಢಪಟ್ಟಿದೆ. ಕಳೆದ ತಿಂಗಳಲ್ಲಿ 720 ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ರಾಜ್ಯದಲ್ಲಿ ಪ್ರಸಕ್ತ ವರ್ಷದ ಒಟ್ಟಾರೆ ಪ್ರಕರಣಗಳು 9 ಸಾವಿರದ ಗಡಿ ದಾಟಿವೆ. ಅಲ್ಲದೇ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 35 ರಷ್ಟು ಪ್ರಕರಣಗಳು ಹೆಚ್ಚು ಪತ್ತೆಯಾಗಿವೆ.
ಗ್ರಾಹಕರೇ ಗಮನಿಸಿ : 2023 ರ ಹೊಸ ವರ್ಷದಿಂದ ಬದಲಾಗಲಿವೆ ಈ ಎಲ್ಲಾ ನಿಯಮಗಳು| Rules Changes 1st January 2023
ಡಿಸೆಂಬರ್ 8 ರಿಂದ 14 ರವರೆಗೂ ನಿತ್ಯ ಒಂದು ಸಾವಿರ ಮಂದಿಗೆ ಜ್ವರ ಕಾಣಿಸಿಕೊಂಡಿದೆ. ಶಂಕಿತರು ಎಂದು ಗುರುತಿಸಿ ಈ ಪೈಕಿ 1,415 ಮಂದಿ ಸೋಂಕು ಪರೀಕ್ಷೆ ನಡೆಸಿದ್ದು, 347 ಮಂದಿಯಲ್ಲಿ ಡೆಂಘೀ ಸೋಂಕು ದೃಢಪಟ್ಟಿವೆ. ಈ ಮೂಲಕ ಸರಾಸರಿ 50 ಮಂದಿಯಲ್ಲಿ ಡೆಂಘೀ ಪ್ರಕರಣಗಳು ದಾಕಲಾಗಿವೆ.
ಹೆಣ್ಣು ಸೊಳ್ಳೆಯಿಂದ ಡೆಂಗ್ಯೂ ಡೆಂಗ್ಯೂ
ಡೆಂಗ್ಯೂ ರೋಗವು ಈಡಿಸ್ ಈಡಿಪ್ಟಿ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ. ಈ ಸೋಂಕಿತ ಸೊಳ್ಳೆ ವ್ಯಕ್ತಿಯನ್ನ ಕಚ್ಚಿದ ನಂತ್ರ ಸೋಂಕಿತ ವೈರಸ್’ನ್ನ ಅವನ ದೇಹದಲ್ಲಿ ಬಿಡುತ್ತದೆ. ಡೆಂಗ್ಯೂ ಬಂದಾಗ ರಕ್ತದಲ್ಲಿನ ಪ್ಲೇಟ್ಲೆಟ್ಗಳು ವೇಗವಾಗಿ ಕಡಿಮೆಯಾಗುತ್ವೆ. ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯು 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೇಟ್ಲೆಟ್ಗಳನ್ನ ಹೊಂದಿರಬೇಕು, ಆದರೆ ಡೆಂಗ್ಯೂನಲ್ಲಿ, ಇದು ಬಹಳ ವೇಗವಾಗಿ ಕಡಿಮೆಯಾಗುತ್ತದೆ, ಕೆಲವೊಮ್ಮೆ ಕೇವಲ 10 ರಿಂದ 20 ಸಾವಿರ ಪ್ಲೇಟ್ಲೆಟ್ಗಳು ರೋಗಿಯಲ್ಲಿ ಉಳಿಯುತ್ತವೆ. ಇದು ದೇಹದ ವಿವಿಧ ಭಾಗಗಳಿಂದ ರಕ್ತಸ್ರಾವದ ಅಪಾಯವನ್ನ ಹೆಚ್ಚಿಸುತ್ತದೆ. ಡೆಂಗ್ಯೂ ಲಕ್ಷಣಗಳು ಕಾಣಿಸಿಕೊಳ್ಳಲು 5 ರಿಂದ 7 ದಿನಗಳು ಬೇಕಾಗುತ್ತದೆ.