ಬೆಂಗಳೂರು : ಹೆಣ್ಣುಮಕ್ಕಳು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ ಎಂದು ನಟಿ ಮೋಹಕ ತಾರೆ ರಮ್ಯಾ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.
ನಟಿ ರಮ್ಯಾ ಶಾರುಖ್ ಖಾನ್ ನಟನೆಯ ‘ಪಠಾಣ್’ ಚಿತ್ರದ ‘ಬೇಷರಂ ರಂಗ್..’ ಹಾಡು ಮತ್ತು ನಟಿ ದೀಪಿಕಾ ಪಡುಕೋಣೆ ಧರಿಸಿರುವ ಬಟ್ಟೆ ಕುರಿತಾಗಿ ಅವರು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಕಿಡಿಕಾರಿದ ರಮ್ಯಾ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು ಎಂದು ಟ್ವೀಟ್ ಮಾಡಿದ್ದಾರೆ. ಸಮಂತಾ ತನ್ನ ವಿಚ್ಛೇದನಕ್ಕಾಗಿ ಟ್ರೋಲ್ ಆದರೆ, ಸಾಯಿ ಪಲ್ಲವಿ ಅವರ ಅಭಿಪ್ರಾಯಕ್ಕಾಗಿ ಟ್ರೋಲ್ ಆಗಿದ್ದಾರೆ. ಅದೇ ರೀತಿ ರಶ್ಮಿಕಾ ಅವರ ಪ್ರತ್ಯೇಕತೆಗಾಗಿ ಟ್ರೋಲ್ ಆಗಿದ್ದಾರೆ. ದೀಪಿಕಾ ಅವರ ಬಟ್ಟೆಗಳಿಗಾಗಿ ಟ್ರೋಲ್ ಆಗಿದ್ದಾರೆ ಎಂದು ಕಿಡಿಕಾರಿದರು.
ಇದಲ್ಲದೇ ಹಲವು ಅನೇಕ ಮಹಿಳೆಯರು ಒಂದಲ್ಲ ಒಂದು ಕಾರಣಕ್ಕೆ ಟ್ರೋಲ್ ಆಗ್ತಾರೆ, ಆಯ್ಕೆಯ ಸ್ವಾತಂತ್ರ್ಯವು ನಮ್ಮ ಮೂಲಭೂತ ಹಕ್ಕು. ಮಹಿಳೆಯರು ದುರ್ಗಾ ಮಾತೆಯ ಪ್ರತಿರೂಪ, ನಾವು ಸ್ತ್ರೀದ್ವೇಷದ ವಿರುದ್ಧ ದಿಟ್ಟತನದಿಂದ ಹೋರಾಡಬೇಕು ಎಂದು ಟ್ವೀಟ್ ಮಾಡಿದ್ದಾರೆ.
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ನಟನೆಯ ‘ಪಠಾನ್’ ಚಿತ್ರ ಇದೀಗ ಭಾರೀ ವಿವಾದ ಸೃಷ್ಟಿಸಿದೆ. ಕೇಸರಿ ಬಣ್ಣದ ಬಿಕಿನಿ ತೊಟ್ಟು ವಿವಾದ ಸೃಷ್ಟಿಸಿದ ದೀಪಿಕಾ ಪಡುಕೋಣೆ ಚಿತ್ರಕ್ಕೆ ಬ್ಯಾನ್ ಬಿಸಿ ತಟ್ಟಿದೆ. ಈ ಸಿನಿಮಾದ ಹೊಸ ಹಾಡು ‘ಬೇಷರಂ ರಂಗ್’ ವಿವಾದಕ್ಕೆ ಸಿಲುಕಿದ್ದು, ಕೇಸರಿ ಬಣ್ಣದ ಬಟ್ಟೆ ತೊಟ್ಟು ಹಾಟ್ ಆಗಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದು, ಇದಕ್ಕೆ ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಪಠಾನ್ ಚಿತ್ರದ ನಿರ್ಮಾಪಕರಿಗೆ ಹಾಡಿನ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಬದಲಾಯಿಸುವಂತೆ ಹೇಳಿದ್ದಾರೆ.
ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಈ ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರ ಬಿಡುಗಡೆಗೆ ತಡೆ ಒಡ್ಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. #ಪಠಾಣ್ ಹಾಡಿನಲ್ಲಿ ನಟಿ ದೀಪಿಕಾ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್ ಅನ್ನು ಬೆಂಬಲಿಸಿದ್ದಾರೆ, ವೇಷಭೂಷಣಗಳು ಹೆಚ್ಚು ಆಕ್ಷೇಪಾರ್ಹವಾಗಿದ್ದು, ಹಾಡನ್ನು ಕೊಳಕು ಮನಸ್ಥಿತಿಯೊಂದಿಗೆ ಚಿತ್ರೀಕರಿಸಲಾಗಿದೆ. ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು, ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಯೋಚಿಸಬೇಕಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
Samantha trolled for her divorce, Sai Pallavi for her opinion,Rashmika for her separation, Deepika for her clothes and many, many other women for pretty much EVERYTHING. Freedom of choice is our basic right. Women are the embodiment of Maa Durga- misogyny is an evil we must fight
— Ramya/Divya Spandana (@divyaspandana) December 16, 2022
ಆಭರಣ ಪ್ರಿಯರೇ ಎಚ್ಚರ ; ‘ನಕಲಿ ಹಾಲ್ಮಾರ್ಕ್’ ಹಾಕಿ ಆಭರಣ ಮಾರಾಟ, ಹೀಗೆ ಜಾಗ್ರತೆ ವಹಿಸಿ