ಚಿಕ್ಕಬಳ್ಳಾಪುರ : ಉಚಿತ ಆರೋಗ್ಯ ಸೇವೆ ನೀಡುವ ‘ಶಾಂತಾ ಮೊಬೈಲ್ ಕ್ಲಿನಿಕ್’ಗೆ ಸಚಿವ ಸುಧಾಕರ್ ಚಾಲನೆ ನೀಡಿದರು.
ಮನೆ ಮನೆಗೂ ಉಚಿತ ಆರೋಗ್ಯ ಸೇವೆ ನೀಡುವ ಮತ್ತೊಂದು ‘ಶಾಂತಾ ಮೊಬೈಲ್ ಕ್ಲಿನಿಕ್’ಗೆ ಇಂದು ಚಿಕ್ಕಬಳ್ಳಾಪುರದ ನಂದಿಯಲ್ಲೂ ಚಾಲನೆ ನೀಡಲಾಯಿತು. ಈಗಾಗಲೇ ಮಂಚೇನಹಳ್ಳಿ ತಾಲ್ಲೂಕು, ಮಂಡಿಕಲ್ ಹೋಬಳಿಯಲ್ಲಿ ಒಂದೊಂದು ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ನಂದಿ ಹೋಬಳಿಯಲ್ಲಿ ಮೂರನೇ ಶಾಂತಾ ಮೊಬೈಲ್ ಕ್ಲಿನಿಕ್ ಉದ್ಘಾಟನೆಗೊಂಡಿದೆ.
ಮೊಬೈಲ್ ಕ್ಲಿನಿಕ್ ನಲ್ಲಿ ನುರಿತ MBBS ವೈದ್ಯರು, ನರ್ಸ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ಇದ್ದು, ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ದೊರೆಯುತ್ತವೆ. ಈ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ನಾನು ಕಳಕಳಿಯ ಮನವಿ ಮಾಡುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ.
ಹಾಗೆಯೇ ಸಚಿವರು ಇಂದು ಚಿಕ್ಕಬಳ್ಳಾಪುರದ ಭೈರನಾಯಕನಹಳ್ಳಿ ಗ್ರಾಮದಲ್ಲಿ ಎತ್ತಿನಹೊಳೆ ಯೋಜನೆಯಡಿ ಅಂದಾಜು ₹31 ಲಕ್ಷ ವೆಚ್ಚದಲ್ಲಿ ನಂದಿ-ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯಿಂದ ಭೈರನಾಯಕನಹಳ್ಳಿ ಗ್ರಾಮದವರೆಗೆ ನಿರ್ಮಿಸುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮನೆ ಮನೆಗೂ ಉಚಿತ ಆರೋಗ್ಯ ಸೇವೆ ನೀಡುವ ಮತ್ತೊಂದು 'ಶಾಂತಾ ಮೊಬೈಲ್ ಕ್ಲಿನಿಕ್'ಗೆ ಇಂದು ಚಿಕ್ಕಬಳ್ಳಾಪುರದ ನಂದಿಯಲ್ಲೂ ಚಾಲನೆ ನೀಡಲಾಯಿತು.
ಈಗಾಗಲೇ ಮಂಚೇನಹಳ್ಳಿ ತಾಲ್ಲೂಕು, ಮಂಡಿಕಲ್ ಹೋಬಳಿಯಲ್ಲಿ ಒಂದೊಂದು ಕ್ಲಿನಿಕ್ ಕಾರ್ಯ ನಿರ್ವಹಿಸುತ್ತಿದ್ದು, ಈಗ ನಂದಿ ಹೋಬಳಿಯಲ್ಲಿ ಮೂರನೇ ಶಾಂತಾ ಮೊಬೈಲ್ ಕ್ಲಿನಿಕ್ ಉದ್ಘಾಟನೆಗೊಂಡಿದೆ.
1/2 pic.twitter.com/GK7toXshDj
— Dr Sudhakar K (@mla_sudhakar) December 16, 2022
ಮೊಬೈಲ್ ಕ್ಲಿನಿಕ್ ನಲ್ಲಿ ನುರಿತ MBBS ವೈದ್ಯರು, ನರ್ಸ್ ಹಾಗೂ ಲ್ಯಾಬ್ ಟೆಕ್ನಿಶಿಯನ್ ಇದ್ದು, ತಪಾಸಣೆ, ಚಿಕಿತ್ಸೆ ಹಾಗೂ ಔಷಧಿಗಳು ಉಚಿತವಾಗಿ ದೊರೆಯುತ್ತವೆ.
ಈ ಉಚಿತ ಆರೋಗ್ಯ ಸೇವೆಯ ಪ್ರಯೋಜನ ಪಡೆದುಕೊಂಡು ಉತ್ತಮ ಆರೋಗ್ಯ ತಮ್ಮದಾಗಿಸಿಕೊಳ್ಳಬೇಕೆಂದು ಸಾರ್ವಜನಿಕರಲ್ಲಿ ನಾನು ಕಳಕಳಿಯ ಮನವಿ ಮಾಡುತ್ತೇನೆ.
2/2
— Dr Sudhakar K (@mla_sudhakar) December 16, 2022
ಮಂಡ್ಯದಲ್ಲಿ ಬಿಜೆಪಿ ಅಲೆ ಎದ್ದಿದೆ, 5 ಸ್ಥಾನ ಗೆಲ್ಲುವುದು ನಿಶ್ಚಿತ – ಸಿಎಂ ಬಸವರಾಜ ಬೊಮ್ಮಾಯಿ