ಮೈಸೂರು : ಬಸ್ ಡಿಪೋ ಬಳಿ ಅಧಿಕಾರಿಗೆ ‘ಮಚ್ಚು’ ತೋರಿಸಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಮೈಸೂರು ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದ್ದಾರೆ.ಪ್ರಕರಣ ಸಂಬಂಧ ಕಾಂಗ್ರೆಸ್ ಮುಖಂಡ ಶಫೀಕ್ ಹಾಗೂ ಪತ್ನಿಯನ್ನು ಬಂಧಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮೈಸೂರು ಜಿಲ್ಲೆಯ ಸಾತಗಳ್ಳಿ ಬಸ್ ಡಿಪೋ ಬಳಿ ಅಧಿಕಾರಿ ಮೇಲೆ ಹಲ್ಲೆ ನಡೆಸಲು ಮಹಿಳೆಯೊಬ್ಬಳು ಮಚ್ಚು ಹಿಡಿದು ಬಂದ ಘಟನೆ ನಡೆದಿತ್ತು. ಬಸ್ ಡಿಪೋ ಜಾಗವನ್ನು ಶಫಿ ಬಾಡಿಗೆಗೆ ಪಡೆದಿದ್ದನು. ಬಾಡಿಗೆ ಪಡೆದ ಜಾಗದಲ್ಲಿ ಶಫೀಕ್ ಕಾಲೇಜು ನಡೆಸುತ್ತಿದ್ದ. ಆದರೆ ಶಫೀಕ್ 1 ಕೋಟಿ 80 ಲಕ್ಷ ರೂ. ಬಾಡಿಗೆ ಬಾಕಿಯನ್ನು ಉಳಿಸಿಕೊಂಡಿದ್ದ. ಶಫೀಕ್ ಬಾಡಿಗೆ ಕಟ್ಟದ ಹಿನ್ನೆಲೆಯಲ್ಲಿ ಡಿಪೋ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೋಟಿಸ್ ನೀಡಿದ್ದರು. ಇದರಿಂದ ಶಫೀಕ್ ಹಾಗೂ ಆತನ ಪತ್ನಿ ಆಕ್ರೋಶಗೊಂಡು ಮಚ್ಚು ಹಿಡಿದು ಡಿಪೋಗೆ ಬಂದಿದ್ದರು.
BREAKING NEWS : ‘ಮುರುಘಾ ಶ್ರೀ’ ವಿರುದ್ಧ ಪಿತೂರಿ ಕೇಸ್ : ಸೌಭಾಗ್ಯ ಬಸವರಾಜನ್ 1 ದಿನ ಪೊಲೀಸ್ ಕಸ್ಟಡಿಗೆ