ಬೆಂಗಳೂರು : ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ “ಮೀಟೂ” ಆರೋಪ ಭಾರೀ ಸಂಚಲನ ಸೃಷ್ಟಿಸಿತ್ತು. ಇದೀಗ ಮಿಟೂ ಪ್ರಕರಣದ ಭಾಗವಾಗಿ ಪ್ರಶಾಂತ್ ಸಂಬರಗಿ ವಿರುದ್ಧ ದಾಖಲಿಸಿದ್ದ ಪ್ರಕರಣದ ವಿಚಾರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ನಗರದ 8 ನೇ ಎಸಿಎಂಎಂ ಕೋರ್ಟ್ ನಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಯನ್ನು ರದ್ದು ಮಾಡಬೇಕು ಎಂದು ಕೋರಿ ಪ್ರಶಾಂತ್ ಸಂಬರಗಿ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿ ತಡೆಯಾಜ್ಞೆ ನೀಡಿದೆ.
ಮಿಟೂ ವಿವಾದಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಸಂಬರಗಿಗೆ ಹೈಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಮಿಟೂ ವಿವಾದದ ವೇಳೆ ಅವಹೇಳನಕಾರಿ ಹೇಳಿಕೆ , ಮಾನಹಾನಿ ಹಿನ್ನೆಲೆ ಪ್ರಶಾಂತ್ ಸಂಬರಗಿ ವಿರುದ್ಧ ಶೃತಿ ಹರಿಹರನ್ ದೂರು ದಾಖಲಿಸಿದ್ದರು. ನಟ ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಆರೋಪದ ಬಗ್ಗೆ ಸರ್ಜಾ ಆಪ್ತ ಪ್ರಶಾಂತ್ ಸಂಬರಗಿ ವಿರುದ್ಧ ಶ್ರುತಿ ಹರಿಹರನ್ ದೂರು ದಾಖಲಿಸಿದ್ದರು. ಜೀವ ಬೆದರಿಕೆ ಹಾಗೂ ಖಾಸಗಿತನಕ್ಕೆ ಧಕ್ಕೆ ಆರೋಪದಡಿ ಪ್ರಕರಣದಡಿ ದೂರು ದಾಖಲು ಮಾಡಲಾಗಿತ್ತು. ಪ್ರಶಾಂತ್ ವಿರುದ್ಧ ಶ್ರುತಿ ಕೊಲೆ ಬೆದರಿಕೆ ಆರೋಪ ಮಾಡಿದ್ದರು.
ರಾತ್ರಿ 1 ರಿಂದ 4ರ ನಡುವೆ ನಿದ್ರೆ ಬರಲ್ವಾ.? ನಿರ್ಲಕ್ಷಿಸ್ಬೇಡಿ, ಇದು ‘ಗಂಭೀರ ಕಾಯಿಲೆ’ ಲಕ್ಷಣ ಆಗಿರ್ಬೋದು ; ಅಧ್ಯಯನ
BIGG NEWS : 78 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ, 68 ವಿದೇಶಿಗರ ಗಡಿ ಪಾರು : ಗೃಹ ಸಚಿವ ಆರಗ ಜ್ಞಾನೇಂದ್ರ